ಬುಧವಾರ, ಆಗಸ್ಟ್ 21, 2019
22 °C

ವೇದಿಕೆಯಲ್ಲೇ ಕುಸಿದ ಸಚಿವ ಗಡ್ಕರಿ

Published:
Updated:
Prajavani

ಸೊಲ್ಲಾಪುರ: ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ರಾಷ್ಟ್ರಗೀತೆ ಹಾಡುತ್ತಿದ್ದ ವೇಳೆ ವೇದಿಕೆಯಲ್ಲೇ ತಲೆಸುತ್ತು ಬಂದು ಕುಸಿದು ಬಿದ್ದಿದ್ದಾರೆ.

ಗಂಟಲು ನೋವು ಶಮನಕ್ಕಾಗಿ ಸಚಿವರು ಸೇವಿಸಿದ್ದ ಆ್ಯಂಟಿಬಯೋಟಿಕ್‌ ಮಾತ್ರೆಯಿಂದಾಗಿ ತಲೆಸುತ್ತು ಬಂದಿದೆ ಎಂದು ವೈದ್ಯರು ತಿಳಿಸಿರುವುದಾಗಿ ಸಚಿವರ ಸಹಾಯಕರು ಹೇಳಿದ್ದಾರೆ.

ಪುಣ್ಯಶ್ಲೋಕ್‌ ಅಹಿಲ್ಯಾದೇವಿ ಹೋಳ್ಕರ್‌ ಸೊಲ್ಲಾಪುರ ವಿಶ್ವವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಂಡಿದ್ದರು. ರಾಷ್ಟ್ರಗೀತೆ ಹಾಡು ತ್ತಿದ್ದಾಗ ನಿಂತುಕೊಂಡಿದ್ದ ಸಚಿವರು ಕುಸಿ ದಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿ ಅವರನ್ನು ಕುರ್ಚಿಯಲ್ಲಿ ಕೂರಿಸಿದ್ದಾರೆ ಎಂದು ಸಹಾಯಕರು ತಿಳಿಸಿದ್ದಾರೆ.

Post Comments (+)