ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಂಗಾಬಾದ್‌–ಉಸ್ಮಾನಾಬಾದ್‌ ಹೆಸರುಬದಲಿಸಲು ಒತ್ತಾಯ

Last Updated 8 ನವೆಂಬರ್ 2018, 18:42 IST
ಅಕ್ಷರ ಗಾತ್ರ

ಮುಂಬೈ:ಮಹಾರಾಷ್ಟ್ರದ ಔರಂಗಾಬಾದ್‌ ಹಾಗೂ ಉಸ್ಮಾನಾಬಾದ್‌ ನಗರಗಳ ಹೆಸರನ್ನು ಬದಲಿಸುವುದು ಯಾವಾಗ ಎಂದು ಶಿವಸೇನಾ ಸಂಸದ ಸಂಜಯ್‌ ರಾವತ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಉತ್ತರಪ್ರದೇಶ ಸರ್ಕಾರವು ಫೈಜಾಬಾದ್‌ ಅನ್ನು ಅಯೋಧ್ಯಾ ಎಂದು, ಅಲಹಾಬಾದ್‌ ಅನ್ನು ಪ್ರಯಾಗ್‌ರಾಜ್‌ ಎಂದು ಬದಲಿಸಿದೆ. ಅದೇ ರೀತಿ, ನಾವು ಔರಂಗಾಬಾದ್‌ ಮತ್ತು ಉಸ್ಮಾನಾಬಾದ್‌ ಹೆಸರನ್ನು ಬದಲಿಸಬೇಕು. ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಈ ನಿಟ್ಟಿನಲ್ಲಿ ಶೀಘ್ರ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಔರಂಗಾಬಾದ್‌ ಅನ್ನು ಸಂಭಾಜಿ ನಗರವೆಂದೂ, ಉಸ್ಮಾನಾಬಾದ್‌ ಅನ್ನು ಧರಶಿವ ಎಂದು ಬದಲಿಸಬೇಕು ಎಂಬುದಾಗಿ ಅವರು ಒತ್ತಾಯಿಸಿದ್ದಾರೆ.

‘ಕಾಂಗ್ರೆಸ್‌ ಮತ್ತು ಎನ್‌ಸಿಪಿ ಅಧಿಕಾರದಲ್ಲಿದ್ದಾಗಲೂ ಈ ನಗರಗಳ ಹೆಸರನ್ನು ಬದಲಿಸಬೇಕು ಎಂದು ನಾವು ಬೇಡಿಕೆ ಇಟ್ಟಿದ್ದೆವು. ಆದರೆ, ಮುಸ್ಲಿಮರನ್ನು ಓಲೈಸುವ ಉದ್ದೇಶದಿಂದ ಅವರು ನಮ್ಮ ಬೇಡಿಕೆಗೆ ಸ್ಪಂದಿಸಲಿಲ್ಲ’ ಎಂದು ಶಿವಸೇನಾ ವಕ್ತಾರ ಮನೀಷ್‌ ಕಾಯಂಡೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT