ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನಗಳಲ್ಲಿ ಮಧ್ಯದ ಸೀಟ್‌ ಖಾಲಿ ಬಿಡಬೇಕು: ಸುಪ್ರೀಂ ಕೋರ್ಟ್

Last Updated 25 ಮೇ 2020, 8:32 IST
ಅಕ್ಷರ ಗಾತ್ರ

ನವದೆಹಲಿ: ವಿದೇಶಗಳಿಂದ ಭಾರತೀಯರನ್ನು ವಿಶೇಷ ವಿಮಾನಗಳ ಮೂಲಕ ಕರೆತರುವಾಗ ಮಧ್ಯದ ಸೀಟ್‌ಗಳನ್ನು ಖಾಲಿ ಬಿಡಬೇಕು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಸೂಚಿಸಿದೆ.

ಕೊರೊನಾ ವಿರುದ್ಧದ ಹೋರಾಟದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹು ಮುಖ್ಯವಾದುದು. ಇದು ಎಲ್ಲರಲ್ಲೂ ಇರಬೇಕಾದ ಸಾಮಾನ್ಯ ಜ್ಞಾನ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಮುಂದಿನ 10 ದಿನಗಳವರೆಗೆ ಮಾತ್ರ ಮಧ್ಯದ ಸೀಟ್‌ಗಳನ್ನು ಭರ್ತಿ ಮಾಡಕೊಂಡು ಹಾರಾಟ ನಡೆಸಬಹುದು. ತದನಂತರದಲ್ಲಿ ಮಧ್ಯದ ಸೀಟ್‌ಗಳನ್ನು ಖಾಲಿ ಬಿಟ್ಟು ವಿಮಾನದೊಳಗೆಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಕೋರ್ಟ್ ಹೇಳಿದೆ.

ಸರ್ಕಾರದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾಕೊರೊನಾ ಹರಡದಂತೆ ತಡೆಯಲು ಪರೀಕ್ಷೆ ಮಾಡಿಸಿಕೊಳ್ಳಬೇಕು ಮತ್ತು ಕ್ವಾರಂಟೈನಲ್ಲಿ ಇರಬೇಕು ಅದನ್ನು ಬಿಟ್ಟು ಸೀಟುಗಳನ್ನು ಖಾಲಿ ಬಿಡುವುದು ಅಲ್ಲ‘ಎಂದು ವಾದ ಮಂಡಿಸಿದರು. ತಜ್ಞರ ಸಲಹೆ ಸೂಚನೆಗಳಂತೆ ವಿಮಾನಗಳ ಹಾರಾಟ ನಡೆಸುತ್ತಿವೆ ಎಂದು ನ್ಯಾಯಾಲಯಕ್ಕೆ ಹೇಳಿದರು.

ಸರ್ಕಾರದ ವಾದವನ್ನು ಒಪ್ಪದ ಮುಖ್ಯ ನ್ಯಾಯಮೂರ್ತಿಗಳು ವಿಮಾನದೊಳಗೂ ಸಾಮಾಜಿಕ ಅಂತರ ಕಪಾಡಿಕೊಳ್ಳಬೇಕು ಎಂದು ಹೇಳಿದರು.

ಇಂದಿನಿಂದ ದೇಶಿಯ ವಿಮಾನಗಳ ಹಾರಾಟ ಆರಂಭವಾಗಿದೆ. ಈ ವಿಮಾನಗಳು ಮಧ್ಯದ ಸೀಟ್‌ ಭರ್ತಿ ಮಾಡಿಕೊಂಡು ಹಾರಾಟ ನಡೆಸುತ್ತಿವೆ. ಸೋಮವಾರ ಸುಪ್ರೀಂ ಕೋರ್ಟ್ ನೀಡಿರುವ ಸೂಚನೆ, ದೇಶಿಯ ವಿಮಾನಗಳ ಹಾರಾಟದ ಮೇಲೂ ಪರಿಣಾಮ ಬೀರಬಹುದು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT