ಶುಕ್ರವಾರ, ಡಿಸೆಂಬರ್ 6, 2019
17 °C

ಉಗ್ರರ ಅಡಗುದಾಣ ಪತ್ತೆ: ಶಸ್ತ್ರಾಸ್ತ್ರ, ಮದ್ದುಗುಂಡು ವಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಉಗ್ರರ ಅಡಗುದಾಣ ಭೇದಿಸಿದ ಭದ್ರತಾ ಪಡೆಗಳು ಶಸ್ತ್ರಾಸ್ತ್ರಗಳು, ಸ್ಯಾಟಲೈಟ್‌ ಫೋನ್‌ ಹಾಗೂ ಭಾರಿ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.

ಉತ್ತರ ಕಾಶ್ಮೀರದ ಸಪೋರ್‌ ಪ್ರದೇಶದ ರಫಿಯಾಬಾದ್‌ ಬಳಿ ಈ ಅಡಗುದಾಣ ಪತ್ತೆಯಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ಎರಡು ಎ.ಕೆ.ರೈಫಲ್‌ಗಳು, 2 ಸಾವಿರ ಮದ್ದುಗುಂಡುಗಳು, ಎರಡು ವಯರ್‌ಲೆಸ್‌ ಸೆಟ್‌ ಹಾಗೂ ಒಂದು ಸ್ಯಾಟಲೈಟ್‌ ಫೋನ್‌ ವಶಪಡಿಸಿಕೊಳ್ಳಲಾಗಿದೆ‘ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು