ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರದಲ್ಲಿ ಸೇನೆಯ ಮೇಲುಗೈ: ಹಿಂಸಾಚಾರಕ್ಕೆ ಕಡಿವಾಣ

Last Updated 9 ಡಿಸೆಂಬರ್ 2018, 3:27 IST
ಅಕ್ಷರ ಗಾತ್ರ

ಶ್ರೀನಗರ: ಕಣಿವೆ ರಾಜ್ಯದಲ್ಲಿ ಇದೊಂದೇ ವರ್ಷದಲ್ಲಿ 232ಭಯೋತ್ಪಾದಕರನ್ನು ಭದ್ರತಾಪಡೆಗಳು ಕೊಂದುಹಾಕಿವೆ ಎಂದು ಸೇನೆಯ ಅಧಿಕಾರಿಗಳು ಹೇಳಿದ್ದಾರೆ

ಜೂನ್ 25ರಿಂದ ಸೆಪ್ಟೆಂಬರ್ 14ರ ನಡುವೆ 51, ಸೆಪ್ಟೆಂಬರ್ 15ರಿಂದ ಡಿಸೆಂಬರ್ 5ರ ನಡುವೆ 85 ಭಯೋತ್ಪಾದಕರನ್ನು ಕೊಲ್ಲಲಾಗಿದೆ.ಪ್ರಸಕ್ತ ಸಾಲಿನಲ್ಲಿ ಈವರೆಗೆ ಒಟ್ಟು 232 ಭಯೋತ್ಪಾದಕರನ್ನು ಕೊಲ್ಲಲಾಗಿದೆ. ಕಣಿವೆ ರಾಜ್ಯದಲ್ಲಿ ಪ್ರಸ್ತುತ ವಿದೇಶಿಯರೂ ಸೇರಿ ಒಟ್ಟು 240 ಭಯೋತ್ಪಾದಕರು ಸಕ್ರಿಯರಾಗಿರುವ ಮಾಹಿತಿ ಇದೆ ಎಂದು ಸೇನೆಯ ಅಧಿಕಾರಿಗಳು ನೀಡಿರುವ ಮಾಹಿತಿಯನ್ನು ಆಧರಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಜೂನ್ 25ರಿಂದ ಸೆ.14ರ ಅವಧಿಯಲ್ಲಿಭದ್ರತಾ ಸಿಬ್ಬಂದಿ ಸೇರಿ ಒಟ್ಟು ಎಂಟು ಮಂದಿ ಹುತಾತ್ಮರಾಗಿದ್ದಾರೆ. ಒಟ್ಟು 216 ಜನರುಗಾಯಗೊಂಡಿದ್ದಾರೆ. ಸೆ.15ರಿಂದ ಡಿ.5ರ ಅವಧಿಯಲ್ಲಿ ಇಬ್ಬರು ಮೃತಪಟ್ಟಿದ್ದು, 170 ಜನರು ಗಾಯಗೊಂಡಿದ್ದಾರೆ.

‘ಸೇನೆಯ ಯತ್ನಕ್ಕೆ ಯಶಸ್ಸು ಸಿಕ್ಕಿದೆ’

ಕಪುರ್ತಲ (ಪಂಜಾಬ್): ಕಾಶ್ಮೀರ ಕಣಿವೆಯಲ್ಲಿ ಶಾಂತಿ ಮರುಸ್ಥಾಪನೆಗೆಸರ್ಕಾರ ಮತ್ತು ಸೇನೆ ಜತೆಗೂಡಿ ನಡೆಸುತ್ತಿರುವ ಯತ್ನಕ್ಕೆ ಯಶಸ್ಸು ಸಿಗುತ್ತಿದೆ. ಭಯೋತ್ಪಾದಕರ ಗುಂಪು ಸೇರುತ್ತಿರುವ ಸ್ಥಳೀಯರ ಯುವಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಸೇನೆಯ ಉತ್ತರ ವಿಭಾಗದ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಹೇಳಿದ್ದಾರೆ.

ಕಪುರ್ತಲ ಪಟ್ಟಣದ ಸೈನಿಕ ಶಾಲೆಗೆ ಭೇಟಿ ನೀಡಿದ ನಂತರ ವರದಿಗಾರರೊಂದಿಗೆ ಮಾತನಾಡಿದ ಅವರು, ‘ಈವರೆಗೆ ಈ ವರ್ಷ ಒಟ್ಟು 225 ಭಯೋತ್ಪಾದಕರನ್ನು ಕೊಲ್ಲಲಾಗಿದೆ. ಭಯೋತ್ಪಾದಕರ ಸಂಚಾರ ಮತ್ತು ಚಟುವಟಿಕೆಗಳ ಬಗ್ಗೆ ಸ್ಥಳೀಯರು ಸೇನೆಗೆ ಮಾಹಿತಿ ನೀಡುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT