ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮೀಕ್ಷಾ ವಿಧಾನ

Last Updated 23 ಏಪ್ರಿಲ್ 2018, 18:11 IST
ಅಕ್ಷರ ಗಾತ್ರ

ಚುನಾವಣಾ ಪೂರ್ವ ಸಮೀಕ್ಷೆಯನ್ನು ಜೈನ್ ವಿಶ್ವವಿದ್ಯಾಲಯವು ದೆಹಲಿಯ ಸಿಎಸ್‌ಡಿಎಸ್-ಲೋಕನೀತಿ ಸಂಸ್ಥೆಯ ಜೊತೆಗೂಡಿ ನಡೆಸಿತ್ತು. ಏ.13ರಿಂದ 18ರ ನಡುವೆ 56 ವಿಧಾನಸಭಾ ಕ್ಷೇತ್ರಗಳ 224 ಮತಗಟ್ಟೆಗಳಲ್ಲಿ ಒಟ್ಟು 3,737 ಮತದಾರರಿಂದ ಮಾಹಿತಿ ಸಂಗ್ರಹಿಸಲಾಯಿತು.

ಸಮೀಕ್ಷೆಗಾಗಿ ಬಹುಹಂತದ ಯಾದೃಚ್ಛಿಕ ಮಾದರಿ ವಿಧಾನವನ್ನು (ಮಲ್ಟಿ ಸ್ಟೇಜ್ ರ‍್ಯಾಂಡಮ್ ಸ್ಯಾಂಪ್ಲಿಂಗ್) ಅನುಸರಿಸಲಾಯಿತು. ವಿಧಾನಸಭಾ ಕ್ಷೇತ್ರಗಳನ್ನು ಆರಿಸಿಕೊಳ್ಳುವಾಗ ಅನುಪಾತ ಆಧರಿತ ಸಂಭವನೀಯ ಆಯ್ಕೆ (ಪ್ರೊಬಬಿಲಿಟಿ ಪ್ರೊಪೋರ್ಷನಲ್ ಟು ಸೈಜ್), ಮತಗಟ್ಟೆಗಳನ್ನು ಆರಿಸಿಕೊಳ್ಳಲು ವ್ಯವಸ್ಥಿತ ಯಾದೃಚ್ಛಿಕ ಮಾದರಿ ವಿಧಾನ (ಸಿಸ್ಟಮ್ಯಾಟಿಕ್ ರ‍್ಯಾಂಡಮ್ ಸ್ಯಾಂಪ್ಲಿಂಗ್) ವಿಧಾನಗಳನ್ನು ಬಳಸಲಾಗಿದೆ.

ಸಿದ್ಧ ಪ್ರಶ್ನಾವಳಿಯನ್ನು ಆಧರಿಸಿ ಮತದಾರರಿಂದ ಉತ್ತರ ಪಡೆದುಕೊಳ್ಳಲಾಯಿತು. ಪ್ರತಿ ಸಂದರ್ಶನದ ಸರಾಸರಿ ಅವಧಿ 25 ನಿಮಿಷವಾಗಿತ್ತು. ಸಂದರ್ಶನಕ್ಕೆಂದು ಗುರುತಿಸಿಕೊಂಡಿದ್ದ ವ್ಯಕ್ತಿ ಸಿಗದ ಸಂದರ್ಭ ಬದಲಿ ವ್ಯಕ್ತಿಗಳಿಂದ ಉತ್ತರ ಪಡೆದುಕೊಳ್ಳಲಾಯಿತು.

ಸಂದರ್ಶನಕ್ಕೆ ಒಳಪಟ್ಟವರ ಸಂಖ್ಯೆ ಮತ್ತು ಮಾದರಿಯು ಬಹುಮಟ್ಟಿಗೆ ರಾಜ್ಯದ ಜನಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿಯೇ ಇತ್ತು. ಲಿಂಗ, ಧರ್ಮ, ಭೌಗೋಳಿಕ ವಲಯ, ಜಾತಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ 2011ರ ಜನಗಣತಿಯನ್ನು ಗಮನದಲ್ಲಿರಿಸಿಕೊಳ್ಳಲಾಗಿತ್ತು. ಸಮೀಕ್ಷೆಯ ಒಟ್ಟಾರೆ ದೋಷದ ಪ್ರಮಾಣ 2.3 ಅಂಶಗಳು.

ಕ್ಷೇತ್ರಕಾರ್ಯವನ್ನು ಜೈನ್ ವಿ.ವಿ.ಯ ಡಾ.ರಿತಿಕಾ ಸ್ಯಾಲ್ ಮತ್ತು ಬೆಂಗಳೂರು ವಿ.ವಿ.ಯ ಡಾ.ವೀಣಾ ದೇವಿ ಸಂಯೋಜಿಸಿದ್ದರು. ಪ್ರೊ.ಸಂದೀಪ್ ಶಾಸ್ತ್ರಿ, ಪ್ರೊ.ಸಂಜಯ್‌ಕುಮಾರ್, ಪ್ರೊ.ಸುಹಾಸ್ ಪಲ್ಷಿಕರ್, ಶ್ರೇಯಸ್ ಸರ್‌ದೇಸಾಯಿ, ಹಿಮಾಂಶು ಭಟ್ಟಾಚಾರ್ಯ ಸಮೀಕ್ಷೆಯನ್ನು ಯೋಜಿಸಿ, ವಿಶ್ಲೇಷಿಸಿದ್ದರು. ಜೈನ್ ವಿಶ್ವ ವಿದ್ಯಾಲಯವು ಸಂಶೋಧನೆಗೆ ಧನ ಸಹಾಯ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT