ಎನ್‌ಆರ್‌ಸಿ ಬಗ್ಗೆ ಕಾಂಗ್ರೆಸ್ ನಿಲುವು ಏನು? : ಅಮಿತ್ ಶಾ 

7

ಎನ್‌ಆರ್‌ಸಿ ಬಗ್ಗೆ ಕಾಂಗ್ರೆಸ್ ನಿಲುವು ಏನು? : ಅಮಿತ್ ಶಾ 

Published:
Updated:

ಮುಘಲ್‌ಸರೈ (ಉತ್ತರ ಪ್ರದೇಶ):   ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿಷಯವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮತಬ್ಯಾಂಕ್‌ ರಾಜಕೀಯ ಮಾಡುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಆರೋಪಿಸಿದ್ದಾರೆ.

ಭಾನುವಾರ ಮುಘಲ್‌ಸರಾಯ್‌ ರೈಲು ನಿಲ್ದಾಣಕ್ಕೆ ದೀನ್‌ ದಯಾಳ್‌ ಉಪಾಧ್ಯಾಯ ಜಂಕ್ಷನ್‌ ಎಂದು ಮರುನಾಮಕರಣ ಮಾಡಿದ ಸಮಾರಂಭದಲ್ಲಿ ಅವರು ಮಾತನಾಡಿದರು.

ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ ಶಾ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಸವಾಲು ಎಸೆದರು.

40.07 ಲಕ್ಷ ಜನರನ್ನು ಕೈಬಿಟ್ಟಿರುವ ಅಸ್ಸಾಂನ ರಾಷ್ಟ್ರೀಯ ಪೌರ ನೋಂದಣಿ(ಎನ್‌ಆರ್‌ಸಿ) ಅಂತಿಮ ಕರಡು ಪಟ್ಟಿ ಬಿಡುಗಡೆಯಾದಂದಿನಿಂದ ಬಿಜೆಪಿ ಸರ್ಕಾರ ವಿರುದ್ಧ ವಿಪಕ್ಷಗಳು ವಾಗ್ದಾಳಿ ನಡೆಸುತ್ತಲೇ ಇದೆ. ವಿಪಕ್ಷಗಳ ಟೀಕೆಗೆ ಉತ್ತರಿಸಿದ ಶಾ, ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಅಕ್ರಮ ವಲಸೆಗಾರರನ್ನು ಬೆಂಬಲಿಸುತ್ತಿದೆ ಎಂದರು.

ಎನ್‌ಆರ್‌ಸಿ ಇರುವುದು ಅಸ್ಸಾಂನಿಂದ ಬಾಂಗ್ಲಾದೇಶಿಗರನ್ನು ಹೊರ ಹಾಕಲು. ಎನ್‌ಆರ್‌ಸಿ ಬೇಡ ಎಂದು ಮಮತಾ ಹೇಳುತ್ತಿದ್ದಾರೆ. ಕಾಂಗ್ರೆಸ್ ಕೂಡಾ ಅದನ್ನೇ ಹೇಳುತ್ತಿದೆ. ನಾನು ರಾಹುಲ್ ಅವರಲ್ಲಿ ಒಂದು ಪ್ರಶ್ನೆಯನ್ನು ಕೇಳುತ್ತಿದ್ದೇನೆ. ಎನ್‌ಆರ್‌ಸಿ ಬೇಕೋ ಬೇಡವೋ? ಅವರು ಏನೂ ಉತ್ತರಿಸಿಲ್ಲ. ಬಾಂಗ್ಲಾದೇಶಿಗರನ್ನು ಇಲ್ಲಿಂದ ಹೊರ ಹಾಕಬೇಕೋ ಬೇಡವೋ? ಈ ಪ್ರಶ್ನೆಯನ್ನು ನಾನು ಕಾಂಗ್ರೆಸಿಗರಿಗೆ ಕೇಳುತ್ತಿದ್ದೇನೆ. ನುಸುಳುಕೋರರನ್ನು ಇಲ್ಲಿರಿಸಬೇಕೋ ಬೇಡವೋ ಎಂಬುದರ ಬಗ್ಗೆ ನೀವೇ ನಿರ್ಧರಿಸಿ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !