ಶುಕ್ರವಾರ, ಜುಲೈ 23, 2021
23 °C

ಮಿಜೋರಾಂ: 10,12ನೇ ತರಗತಿ ಪರೀಕ್ಷೆಗಳು ಮತ್ತೆ ಮುಂದಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

School kids

ಐಜ್ವಾಲ್: ಕೋವಿಡ್‌–19 ವ್ಯಾಪಕವಾಗುತ್ತಿರುವ ಕಾರಣ ಮಿಜೋರಾಂ ಸರ್ಕಾರ 10 ಮತ್ತು 12ನೇ ತರಗತಿಯ ಬೋರ್ಡ್‌ ಪರೀಕ್ಷೆಗಳನ್ನು ಮತ್ತೊಮ್ಮೆ ಮುಂದೂಡಿದ್ದು, ಜುಲೈ 1ರಿಂದ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

10ನೇ ತರಗತಿಯ (ಎಚ್‌ಎಸ್‌ಎಸ್‌ಎಲ್‌ಸಿ) ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ಏಪ್ರಿಲ್‌ನಲ್ಲಿ ಮುಂದೂಡಲಾಗಿತ್ತು. ನಂತರ ಪ್ರಕಟಿಸಿದ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಈ ಪರೀಕ್ಷೆಗಳು ಜೂನ್‌ 16ರಿಂದ ನಡೆಯಬೇಕಿತ್ತು. 

12ನೇ ತರಗತಿಯ ಉಳಿದ ಪರೀಕ್ಷೆ ಜುಲೈ 1 ರಿಂದ ನಡೆಯಲಿವೆ ಎಂದು ಮಿಜೋರಾಂ ಶಾಲಾ ಶಿಕ್ಷಣ ಮಂಡಳಿ (ಎಂಬಿಎಸ್‌ಇ) ಹೇಳಿದೆ.

ಜೂನ್ 22 ರವರೆಗೆ ಸರ್ಕಾರ ಸಂಪೂರ್ಣ ಲಾಕ್‌ಡೌನ್ ವಿಧಿಸಿದ್ದರಿಂದ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

10ನೇ ತರಗತಿಯ ವಿಭಾಗೀಯ ಪರೀಕ್ಷೆಗಳು ಜುಲೈ 1ರಿಂದ ಆರಂಭವಾಗಲಿವೆ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು