ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಜೋರಾಂ: ಮುಖ್ಯಮಂತ್ರಿಗೆ ₹ 1.84 ಲಕ್ಷ ಸಂಬಳ, ಶಾಸಕರ ವೇತನ ಶೇ 130ರಷ್ಟು ಏರಿಕೆ

Last Updated 21 ನವೆಂಬರ್ 2019, 20:00 IST
ಅಕ್ಷರ ಗಾತ್ರ

ಐಜ್ವಾಲ್: ಶಾಸಕರ ವೇತನ ಹಾಗೂ ತುಟ್ಟಿಭತ್ಯೆಯನ್ನು ಶೇ 130ರಷ್ಟು ಹೆಚ್ಚಿಸುವ ತಿದ್ದುಪಡಿ ಮಸೂದೆಯನ್ನುಮಿಜೋರಾಂ ವಿಧಾನಸಭೆ ಗುರುವಾರ ಅಂಗೀಕರಿಸಿದೆ.

ಶಾಸಕರ ವೇತನ ₹ 65 ಸಾವಿರದಿಂದ ₹ 1.50 ಲಕ್ಷಕ್ಕೆ ಹೆಚ್ಚಳವಾಗಿದೆ. ಪರಿಷ್ಕೃತ ವೇತನದ ಪ್ರಕಾರ, ಮುಖ್ಯಮಂತ್ರಿಗೆ ತಿಂಗಳಿಗೆ ₹ 1.84 ಲಕ್ಷ ಸಂಬಳ ದೊರೆಯಲಿದೆ. ಸ್ಪೀಕರ್ ₹ 1.73 ಲಕ್ಷ, ಪ್ರತಿಪಕ್ಷ ನಾಯಕ ₹ 1.68 ಲಕ್ಷ ಸಂಬಳ ಪಡೆಯಲಿದ್ದಾರೆ.

ಪಿಂಚಣಿಯ ಮೊತ್ತ ತಿಂಗಳಿಗೆ ₹ 25 ಸಾವಿರದಿಂದ ₹ 40 ಸಾವಿರಕ್ಕೆ ಏರಿಕೆಯಾಗಿದೆ. ಒಂದಕ್ಕಿಂತ ಹೆಚ್ಚು ಬಾರಿ ಆಯ್ಕೆಯಾದ ಶಾಸಕರಿಗೆ ಹೆಚ್ಚುವರಿಯಾಗಿ ₹ 5 ಸಾವಿರ ದೊರೆಯಲಿದೆ. ಗೆಜೆಟ್‌ನಲ್ಲಿ ಅಧಿಸೂಚನೆ ಪ್ರಕಟವಾದ ಕೂಡಲೇ ಪರಿಷ್ಕೃತ ವೇತನ ಜಾರಿಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT