ಮಂಗಳವಾರ, ಅಕ್ಟೋಬರ್ 15, 2019
29 °C

ಕಾರು ಅಪಘಾತ: ಎಂಎನ್‌ಎಸ್‌ ಅಧ್ಯಕ್ಷ ರಾಜ್‌ ಠಾಕ್ರೆ ಅಪಾಯದಿಂದ ಪಾರು

Published:
Updated:

ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್‌ ಠಾಕ್ರೆ ಅವರ ಕಾರು ಅಪಘಾತಕ್ಕಿಡಾಗಿದ್ದು ಅವರು ಅಪಾಯದಿಂದ ಪಾರಾಗಿದ್ದಾರೆ.

ನವಿ ಮುಂಬೈ ಸಮೀಪದ ಸಂಪದ ಪ್ರದೇಶದಲ್ಲಿ ಕಾರು ಅಪಘಾತಕ್ಕಿಡಾಗಿದ್ದು ರಾಜ್‌ ಠಾಕ್ರೆ ಅವರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.

ಲೋನಾವಲದಲ್ಲಿರುವ ಏಕ್ವಿರಾ ದೇವಿಯ ದರ್ಶನ ಪಡೆದು ವಾಪಾಸು ಮರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ರಾಜ್‌ ಠಾಕ್ರೆ ಅವರ ಕಾರಿಗೆ ಎದುರಿನಿಂದ ಬಂದ ಮಹೇಂದ್ರ ಜೀಪು ಡಿಕ್ಕಿ ಹೊಡೆದಿದೆ. ಕಾರಿನ ಮುಂಭಾಗಕ್ಕೆ ಹಾನಿಯಾಗಿದ್ದು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ. 

Post Comments (+)