ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳುತ್ತಿದ್ದ ಮಗುವನ್ನು ಕರೆದೊಯ್ಯುತ್ತಿದ್ದಾಗ ಅಪಹರಣಕಾರ ಎಂದು ಶಂಕಿಸಿ ಹಲ್ಲೆ

Last Updated 6 ಸೆಪ್ಟೆಂಬರ್ 2019, 11:20 IST
ಅಕ್ಷರ ಗಾತ್ರ

ರಾಂಚಿ: ಮಕ್ಕಳ ಅಪಹರಣಕಾರರು ಎಂಬ ಶಂಕೆಯಿಂದ ಅಮಾಯಕ ವ್ಯಕ್ತಿಗಳ ಮೇಲೆ ಹಲ್ಲೆ ನಡೆಯುತ್ತಿರುವ ಘಟನೆಗಳು ಉತ್ತರ ಭಾರತದಲ್ಲಿ ಆಗಾಗವರದಿಯಾಗುತ್ತಲೇ ಇವೆ. ಗುರುವಾರ ಜಾರ್ಖಂಡ್‌ನ ಜಮಾರ್ತ ಜಿಲ್ಲೆಯಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿದೆ.

ಮಗು ಅಪಹರಣಕಾರ ಎಂದು ಶಂಕಿಸಿ ಗುಂಪೊಂದು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದೆ. ಆಮೇಲೆ ಜತೆಯಲ್ಲಿರುವುದು ಆತನದ್ದೇ ಮಗು ಎಂದು ತಿಳಿದು ಬಂದಿತ್ತು.ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ ಬಿಂದಪಥಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಗೆದಿಯಾ ಗ್ರಾಮದ ನಿವಾಸಿ ಪಿಂಟೂಲಾಲ್ ಬರ್ಮಾನ್ ತನ್ನ 6 ಮತ್ತು 10 ವರ್ಷದ ಮಕ್ಕಳನ್ನು ಕರೆದುಕೊಂಡು ಧನ್‌ಬಾದ್‌ಗೆ ಹೋಗುತ್ತಿದ್ದರು. ಚಿಕ್ಕ ಮಗ ತಿಂಡಿ ಬೇಕು ಎಂದು ಹಟ ಹಿಡಿದಾಗ ಬರ್ಮಾನ್ ಮಗುವಿಗೆ ಹೊಡೆದಿದ್ದಾರೆ. ಆ ಹೊತ್ತಿಗೆ ಅಲ್ಲಿದ್ದ ಜನರು,ಬರ್ಮಾನ್ ಮಗುವನ್ನು ಅಪಹರಿಸಿಕೊಂಡು ಹೋಗುತ್ತಿದ್ದಾರೆ ಎಂದು ಶಂಕಿಸಿ ಹಲ್ಲೆ ನಡೆಸಿದ್ದಾರೆ.

ತಕ್ಷಣವೇ ಪೊಲೀಸರಿಗೆ ಮಾಹಿತಿ ತಲುಪಿದ್ದರಿಂದ ಬರ್ಮಾನ್ ಪ್ರಾಣ ಉಳಿದಿದೆ.
ಕಳೆದ ಕೆಲವು ದಿನಗಳಿಂದ ನನ್ನ ಪತ್ನಿಯ ಆರೋಗ್ಯ ಸರಿ ಇರಲಿಲ್ಲ.ಹಾಗಾಗಿ ಧನ್‌ಬಾದ್‌ನಲ್ಲಿರುವ ನನ್ನ ಅಣ್ಣನ ಮನೆಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದೆ ಎಂದು ಬರ್ಮಾನ್ ಪೊಲೀಸರಲ್ಲಿ ಹೇಳಿದ್ದಾರೆ.

ವ್ಯಕ್ತಿಯನ್ನು ಕಾಪಾಡಿದ್ದೀವಿ. ನಾವು ಅಲ್ಲಿಗೆ ತಲುಪಿದಾಗ ಗುಂಪಿನ ಮಧ್ಯೆ ಇದ್ದರವರು ಎಂದು ಜಮಾರ್ತ ಪೊಲೀಸ್ ಠಾಣೆಯ ಉಸ್ತುವಾರಿ ಮನೋಜ್ ಕುಮಾರ್ ಹೇಳಿದ್ದಾರೆ. ಜತೆಯಲ್ಲಿದ್ದದ್ದು ಬರ್ಮಾನ್ ಅವರ ಮಕ್ಕಳು ಎಂದು ಪೊಲೀಸರು ದೃಢೀಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT