ಗುಂಪುಹಲ್ಲೆ ಆಡಳಿತದ ವೈಫಲ್ಯ: ಟಿ.ಎಸ್‌. ಠಾಕೂರ್‌ ಅಭಿಪ್ರಾಯ

7

ಗುಂಪುಹಲ್ಲೆ ಆಡಳಿತದ ವೈಫಲ್ಯ: ಟಿ.ಎಸ್‌. ಠಾಕೂರ್‌ ಅಭಿಪ್ರಾಯ

Published:
Updated:

ನವದೆಹಲಿ: ‘ಗುಂಪು ಹಲ್ಲೆಯಂತಹ ಪ್ರಕರಣಗಳು ಹೆಚ್ಚುತ್ತಿರುವುದು, ಉದ್ರಿಕ್ತ ಗುಂಪು ಕಾನೂನನ್ನು ಕೈಗೆತ್ತಿಕೊಳ್ಳುತ್ತಿರುವ ಬೆಳವಣಿಗೆಗಳು ಕಾನೂನು ಆಡಳಿತದ ವೈಫಲ್ಯವನ್ನು ಎತ್ತಿತೋರುತ್ತಿದೆ’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್‌ ಅಭಿಪ್ರಾಯಪಟ್ಟರು.

ಕೇಂದ್ರದ ಕಾನೂನು ಖಾತೆಯ ಮಾಜಿ ಸಚಿವ ಎಂ.ವೀರಪ್ಪ ಮೊಯಿಲಿ ಅವರು ರಚಿಸಿರುವ ‘ದಿ ವ್ಹೀಲ್‌ ಆಫ್‌ ಜಸ್ಟೀಸ್‌’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬುಧವಾರ ಅವರು ಮಾತನಾಡಿದರು.

ಯಾವುದೇ ವ್ಯಕ್ತಿ ತಪ್ಪು ಮಾಡಿದ್ದಾನೆ ಎಂದು ಭಾವಿಸಿದ ಕೂಡಲೇ ಗುಂಪುಗೂಡಿ ಆತನನ್ನು ಶಿಕ್ಷೆಗೆ ಒಳಪಡಿಸುವುದು ಸರಿಯಲ್ಲ. ಆತನ ಕೃತ್ಯವು ಕಾನೂನಿನ ದೃಷ್ಟಿಯಲ್ಲಿ ಅಪರಾಧ ಎಂದು ಸಾಬೀತಾದ ನಂತರ ನ್ಯಾಯ ವ್ಯವಸ್ಥೆಯಡಿ ಆತನನ್ನು ಶಿಕ್ಷಿಸಬೇಕು. ಮುಂಬೈ ದಾಳಿಯ ರೂವಾರಿ, ಪಾಕಿಸ್ತಾನದ ಕಸಬ್‌ನನ್ನು ವಿಚಾರಣೆಗೆ ಒಳಪಡಿಸಿ, ರಾಷ್ಟ್ರಪತಿಯವರು ಕ್ಷಮಾದಾನ ನೀಡಲು ನಿರಾಕರಿಸಿದ ನಂತರವಷ್ಟೇ ಗಲ್ಲಿಗೇರಿಸಲಾಗಿದೆ ಎಂದರು.

ಕಾನೂನಿನ ಪರಿಕಲ್ಪನೆಯು ಒಂದು ಕಡೆಯಿಂದ ಇನ್ನೊಂದು ಕಡೆ ಭಿನ್ನವಾಗಿರುತ್ತದೆ. ಎಲ್ಲ ಸಿದ್ಧಾಂತಗಳು ಇದನ್ನು ಒಪ್ಪಿಯಾಗಿದೆ ಎಂದು ಪುಸ್ತಕ ಬಿಡುಗಡೆ ಮಾಡಿದ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ತಿಳಿಸಿದರು.

ರಾಜಕಾರಣದಲ್ಲಿದ್ದೂ ಬರವಣಿಗೆಗೆ ಸಮಯವನ್ನು ಹೊಂದಿಸಿಕೊಳ್ಳುವ ಮೊಯಿಲಿ ಅವರ ಅಭಿರುಚಿ ಅಭಿನಂದನೀಯ ಎಂದು ಪುಸ್ತಕದ ಕುರಿತು ಮಾತನಾಡಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಅಭಿಪ್ರಾಯಪಟ್ಟರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !