ದನಕಳ್ಳರೆಂದು ಶಂಕಿಸಿ ಥಳಿತ: ವ್ಯಕ್ತಿ ಸಾವು

7

ದನಕಳ್ಳರೆಂದು ಶಂಕಿಸಿ ಥಳಿತ: ವ್ಯಕ್ತಿ ಸಾವು

Published:
Updated:

ಗುವಾಹಟಿ: ಅಸ್ಸಾಂನ ಬಿಸ್ವನಾಥ ಜಿಲ್ಲೆಯ ಡಿಪ್ಲೊಂಗಾ ಟೀ ಎಸ್ಟೇಟ್‌ನಲ್ಲಿ ದನಕಳ್ಳರೆಂಬ ಶಂಕೆಯ ಮೇಲೆ ನಾಲ್ವರನ್ನು ಸಾರ್ವಜನಿಕರು ಥಳಿಸಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ

‘ನಾಲ್ವರು ಆರೋಪಿಗಳು ಸಂಕತ್‌ ತಂತಿ ಎಂಬುವವರ ಎರಡು ಹಸುಗಳನ್ನು ಅಪಹರಿಸಿ, ಸಂಖ್ಯಾಫಲಕ ಇಲ್ಲದ ವಾಹನದಲ್ಲಿ  ಸಾಗಿಸುತ್ತಿ
ದ್ದರು. ಇದನ್ನು ಕಂಡ ಸಂಕತ್‌ ಕೂಗಿ ಜನರನ್ನು ಸೇರಿಸಿದ್ದಾರೆ. ನಾಲ್ವರನ್ನು ಹಸುವಿನೊಂದಿಗೆ ನೋಡಿದ ಗ್ರಾಮಸ್ಥರು ಏಕಾಏಕಿ ಆರೋಪಿಗಳನ್ನು ಥಳಿಸಿದ್ದಾರೆ ಎಂದು  ತನಿಖೆಯಿಂದ ತಿಳಿದುಬಂದಿದೆ’  ಎಂದು ಬಿಸ್ವನಾಥ ಎಸ್ಪಿ ದಿಗಂತ್‌ ಕುಮಾರ್ ಚೌಧರಿ ತಿಳಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !