ಮೋದಿ ವಿಷ್ಣುವಿನ 11ನೇ ಅವತಾರ: ಅವಧೂತ್‌ ವಾಘ್‌

7

ಮೋದಿ ವಿಷ್ಣುವಿನ 11ನೇ ಅವತಾರ: ಅವಧೂತ್‌ ವಾಘ್‌

Published:
Updated:

ಮುಂಬೈ: ‘ಪ್ರಧಾನಿ ನರೇಂದ್ರ ಮೋದಿ ವಿಷ್ಣುವಿನ 11ನೇ ಅವತಾರ’ ಎಂದು ಮಹಾರಾಷ್ಟ್ರದ ಬಿಜೆಪಿ ವಕ್ತಾರ ಅವಧೂತ್‌ ವಾಘ್‌ ಬಣ್ಣಿಸಿದ್ದಾರೆ.

‘ದೇಶಕ್ಕೆ ದೇವರಂತಹ ವ್ಯಕ್ತಿತ್ವವುಳ್ಳ ನರೇಂದ್ರ ಮೋದಿ ಅವರು ದೊರೆತಿರುವುದು ಅದೃಷ್ಟ’ ಎಂದು ಅವರು ಹೇಳಿದ್ದಾರೆ.

ಅವಧೂತ್‌ ಮಾಡಿರುವ ಟ್ವೀಟ್‌ಗೆ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಕಟುವಾಗಿ ಟೀಕಿಸಿದ್ದು, ಇದು ದೇವರಿಗೆ ಮಾಡಿದ ಅವಮಾನ ಎಂದು ತಿಳಿಸಿದೆ.

‘ವಾಘ್‌ ಅವರು ಎಂಜಿನಿಯರಿಂಗ್‌ ಪದವೀಧರರು. ಆದರೆ, ಈಗ ಅವರ ಪದವಿಯ ಪ್ರಮಾಣಪತ್ರಗಳ ನೈಜತೆಯನ್ನು ಪರಿಶೀಲಿಸುವುದು ಅಗತ್ಯ
ವಿದೆ. ಇಂತಹ ಹೇಳಿಕೆಯನ್ನು ಅವರಿಂದ ನಿರೀಕ್ಷಿಸಿರಲಿಲ್ಲ’ ಎಂದು ಎನ್‌ಸಿಪಿ ಶಾಸಕ ಜಿತೇಂದ್ರ ಅವ್ಹಾದ್‌ ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 0

  Sad
 • 1

  Frustrated
 • 4

  Angry

Comments:

0 comments

Write the first review for this !