ಶನಿವಾರ, ಜೂನ್ 6, 2020
27 °C

ಕೋವಿಡ್‌–19: ಶ್ರೀಲಂಕಾ ಅಧ್ಯಕ್ಷ ಹಾಗೂ ಮಾರಿಷಸ್‌ ಪ್ರಧಾನಿ ಜೊತೆ ಮೋದಿ ಚರ್ಚೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್‌–19 ಪಿಡುಗಿನಿಂದಾಗಿ ಉದ್ಬವಿಸಿರುವ ಪರಿಸ್ಥಿತಿಯ ಕುರಿತು ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಹಾಗೂ ಮಾರಿಷಸ್‌ ಪ್ರಧಾನಿ ಪ್ರವಿಂದ್‌ ಜುಗ್ನೌತ್‌ ಅವರ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚರ್ಚೆ ನಡೆಸಿದರು. 

‘ರಾಜಪಕ್ಸೆ ಅವರ ನಾಯಕತ್ವದಲ್ಲಿ, ಶ್ರೀಲಂಕಾ ಕೋವಿಡ್‌–19 ವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ನಡೆಸುತ್ತಿದೆ’ ಎಂದು ಮೋದಿ ಟ್ವೀಟ್‌ ಮೂಲಕ ಶ್ಲಾಘಿಸಿದ್ದಾರೆ. ‘ಪಿಡುಗಿನ ವಿರುದ್ಧದ ಹೋರಾಟ ಹಾಗೂ ಪಿಡುಗಿನಿಂದಾಗಿ ಆರ್ಥಿಕತೆ ಮೇಲೆ ಆದಂಥ ಪ್ರಭಾವ ಎದುರಿಸುವಲ್ಲಿ ನೆರೆರಾಷ್ಟ್ರವಾದ ಶ್ರೀಲಂಕಾಗೆ ಭಾರತದ ಬೆಂಬಲ ಮುಂದುವರಿಯಲಿದೆ. ಶ್ರೀಲಂಕಾದಲ್ಲಿ ಭಾರತದ ನೆರವಿನೊಂದಿಗೆ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಯೋಜನೆಗಳಿಗೆ ಚುರುಕು ನೀಡಲು ಹಾಗೂ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಲು ನಿರ್ಧರಿಸಿದ್ದೇವೆ’ ಎಂದಿದ್ದಾರೆ.

ಮಾರಿಷಸ್‌ನಲ್ಲಿ ಜುಗ್ನೌತ್‌ ಅವರು ಕೈಗೊಂಡಿರುವ ಕ್ರಮಗಳ ಬಗ್ಗೆ ಶ್ಲಾಘಿಸಿರುವ ಮೋದಿ, ‘ಇಂಥ ಕಷ್ಟದ ಸಂದರ್ಭದಲ್ಲಿ ಭಾರತ ಮಾರಿಷಸ್‌ ಜೊತೆಗಿರಲಿದೆ’ ಎಂದು ತಿಳಿಸಿದ್ದಾರೆ. ಆಪರೇಷನ್‌ ಸಾಗರ್‌ ಭಾಗವಾಗಿ ನೌಕಾಸೇನೆ ಹಡಗು ‘ಕೇಸರಿ’ಯಲ್ಲಿ ಮಾರಿಷಸ್‌ಗೆ ಔಷಧಿ ಹಾಗೂ 14 ಸದಸ್ಯರಿದ್ದ ವೈದ್ಯಕೀಯ ತಂಡವನ್ನು ಕಳುಹಿಸಿಕೊಟ್ಟಿರುವುದಕ್ಕೆ ಮೋದಿ ಅವರಿಗೆ ಜುಗ್ನೌತ್‌ ಅಭಿನಂದನೆ ಸಲ್ಲಿಸಿದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು