ಕಾಂಗ್ರೆಸ್‌ನಿಂದ ದೇಶ ಒಡೆಯುವ ಪ್ರಯತ್ನ: ಅಮಿತ್ ಶಾ ವಾಗ್ದಾಳಿ

7
ಮೋದಿ ಸರ್ಕಾರದಿಂದ ‘ಮೇಕ್‌ ಇನ್‌ ಇಂಡಿಯಾ’, ಕಾಂಗ್ರೆಸ್‌ನಿಂದ ‘ಬ್ರೇಕಿಂಗ್‌ ಇಂಡಿಯಾ’ ಎಂದು ವ್ಯಂಗ್ಯ

ಕಾಂಗ್ರೆಸ್‌ನಿಂದ ದೇಶ ಒಡೆಯುವ ಪ್ರಯತ್ನ: ಅಮಿತ್ ಶಾ ವಾಗ್ದಾಳಿ

Published:
Updated:

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರ ‘ಮೇಕ್‌ ಇನ್‌ ಇಂಡಿಯಾ’ (ಭಾರತದಲ್ಲೇ ಉತ್ಪಾದಿಸುವ ಯೋಜನೆ) ಮಾಡುತ್ತಿದ್ದರೆ ಕಾಂಗ್ರೆಸ್ ‘ಬ್ರೇಕಿಂಗ್ ಇಂಡಿಯಾ’ (ಭಾರತವನ್ನು ಒಡೆಯುವ) ಮಾಡಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವ್ಯಂಗ್ಯವಾಡಿದರು.

ದೆಹಲಿಯಲ್ಲಿ ನಡೆಯುತ್ತಿರುವ ಪಕ್ಷದ ಕಾರ್ಯಕಾರಿ ಸಮಿತಿ ಎರಡು ದಿನಗಳ ಸಭೆಯ ಮೊದಲ ದಿನವಾದ ಶನಿವಾರ ಮಾತನಾಡಿದ ಅವರು, ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 2014ರ ಲೋಕಸಭಾ ಚುನಾವಣೆಗಿಂತಲೂ ದೊಡ್ಡ ಪ್ರಮಾಣದಲ್ಲಿ ಜಯಸಾಧಿಸಲಿದೆ ಎಂದರು.

ಇದನ್ನೂ ಓದಿ: ಅಮಿತ್‌ ಶಾ ನೇತೃತ್ವದಲ್ಲೇ ಲೋಕಸಭೆ ಚುನಾವಣೆ ಎದುರಿಸಲು ಬಿಜೆಪಿ ನಿರ್ಧಾರ

ಮೋದಿ ನೇತೃತ್ವದ ಸರ್ಕಾರ ದೇಶದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದೆ. ಆರ್ಥಿಕತೆಯ ಆಧಾರದಲ್ಲಿ ಹೇಳುವುದಾದರೆ ಇಂದು ಭಾರತವು ಫ್ರಾನ್ಸ್‌ ಅನ್ನೂ ಹಿಂದಿಕ್ಕಿದೆ. 19 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆ. ದೇಶದ ಶೇ 75ರಷ್ಟು ಭಾಗವನ್ನು ಬಿಜೆಪಿ ಆಡಳಿತ ನಡೆಸುತ್ತಿದೆ ಎಂದು ಅವರು ಹೇಳಿದರು.

‘ನಾವು ಈಗಿರುವ ಸ್ಥಾನಗಳಿಗೇ ಸಂತೃಪ್ತರಾಗಬಾರದು. 2019ರ ಚುನಾವಣೆಯಲ್ಲಿ ಇದಕ್ಕಿಂತಲೂ ಹೆಚ್ಚು ದೊಡ್ಡ ಜಯ ಸಾಧಿಸಲು ಶ್ರಮಿಸಬೇಕು’ ಎಂದು ಶಾ ಹೇಳಿದರು.

ಮಹಾಮೈತ್ರಿ ಎಂಬುದೊಂದು ಭ್ರಮೆ. ಸುಳ್ಳಿನ ಆಧಾರದಲ್ಲಿ ನಿರ್ಮಾಣಗೊಂಡಿದೆ ಎಂದೂ ಶಾ ಟೀಕಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 3

  Amused
 • 0

  Sad
 • 0

  Frustrated
 • 10

  Angry

Comments:

0 comments

Write the first review for this !