ರಾಮ ಮಂದಿರ ನಿರ್ಮಾಣ ಭರವಸೆಯಿಂದ ಹಿಂದೆ ಸರಿದ ಮೋದಿ: ತೊಗಾಡಿಯಾ

7

ರಾಮ ಮಂದಿರ ನಿರ್ಮಾಣ ಭರವಸೆಯಿಂದ ಹಿಂದೆ ಸರಿದ ಮೋದಿ: ತೊಗಾಡಿಯಾ

Published:
Updated:
Deccan Herald

ಬದೌನ್‌, ಉತ್ತರ ಪ್ರದೇಶ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ ಕಲಂ 370 ರದ್ದುಗೊಳಿಸುವ ಭರವಸೆಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೆ ಸರಿಯುತ್ತಿದ್ದಾರೆ ಎಂದು ಹಿಂದುತ್ವವಾದಿ ಮುಖಂಡ ಪ್ರವೀಣ್‌ ತೊಗಾಡಿಯಾ ಶುಕ್ರವಾರ ಆರೋಪಿಸಿದ್ದಾರೆ.

ಈ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಮೋದಿ ಅವರನ್ನು ದೇಶದ ಜನರು ಆಯ್ಕೆ ಮಾಡಿದ್ದಾರೆ. ಆದರೆ ಅವರು ದೇಗುಲಕ್ಕೆ ತೆರಳುವ ಬದಲು ಮಸೀದಿಗೆ ಭೇಟಿ ನೀಡಲು ಆರಂಭಿಸಿದ್ದಾರೆ ಎಂದು ಹೇಳಿದ್ದಾರೆ.

‘ಮೋದಿ ಅವರನ್ನು ರಾಮ ಮಂದಿರ ಪರ ವಕೀಲರನ್ನಾಗಿ ಆಯ್ಕೆ ಮಾಡಿ ಕಳುಹಿಸಿದರೆ ಅವರು ಮುಸ್ಲಿಮರ ಪತ್ನಿಯರ ವಕೀಲರಾಗಿದ್ದಾರೆ’ ಎಂದು ತೊಗಾಡಿಯಾ ಅವರು ತ್ರಿವಳಿ ತಲಾಖ್‌ ತಡೆ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವುದನ್ನು ಉಲ್ಲೇಖಿಸಿ ಲೇವಡಿ ಮಾಡಿದ್ದಾರೆ.

ಹಣಕಾಸು ನೀತಿ ಹಾಗೂ ದೇಶದ ಭದ್ರತೆ ಕುರಿತ ಕೇಂದ್ರ ಸರ್ಕಾರದ ನಡೆಯನ್ನು ಟೀಕಿಸಿರುವ ಅವರು, ‘ರೈತರು ಮತ್ತು ಯುವಜನರು ಸಂಕಷ್ಟದಲ್ಲಿದ್ದಾರೆ. ಯೋಧರು ಕೂಡ ಸುರಕ್ಷಿತರಾಗಿಲ್ಲ’ ಎಂದಿದ್ದಾರೆ.

ಭಾರತೀಯ ಸೈನಿಕರ ಮೇಲೆ ಪಾಕ್‌ ಪಡೆಗಳು ದಾಳಿ ನಡೆಸುತ್ತಿದ್ದರೂ ‘56 ಇಂಚಿನ ಎದೆ’ ಇರುವವರು ಮೌನವಾಗಿದ್ದಾರೆ’ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 

 

 

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !