ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯಾಯ ಸರಿಪಡಿಸಲು ಸಿಎಎ: ಮೋದಿ

Last Updated 28 ಜನವರಿ 2020, 19:59 IST
ಅಕ್ಷರ ಗಾತ್ರ

‌ನವದೆಹಲಿ (ಪಿಟಿಐ): ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ‘ಚಾರಿತ್ರಿಕ ಅನ್ಯಾಯ’ವನ್ನು ಸರಿಪಡಿಸುವುದಕ್ಕಾಗಿಯೇ ಇದನ್ನು ಜಾರಿಗೆ ತರಲಾಗುತ್ತಿದೆ’ ಎಂದು ಹೇಳಿದ್ದಾರೆ.

ನೆಹರೂ–ಲಿಯಾಖತ್ ಒಪ್ಪಂದವನ್ನು ಉಲ್ಲೇಖಿಸಿರುವ ಪ್ರಧಾನಿ, ನೆರೆ ರಾಷ್ಟ್ರಗಳಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರಿಗೆ ನೀಡಲಾಗಿದ್ದ ‘ಹಳೆಯ ಭರವಸೆ’ಗಳನ್ನು ಈಡೇರಿಸುವುದೇ ಕಾಯ್ದೆಯ ಉದ್ದೇಶ ಎಂದಿದ್ದಾರೆ.

ಎನ್‌ಸಿಸಿ ವಾರ್ಷಿಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪಡೆದಂದಿನಿಂದಲೂ ಕೆಲ ಕುಟುಂಬಗಳು, ರಾಜಕೀಯ ಪಕ್ಷಗಳು ಕಾಶ್ಮೀರ ಸಮಸ್ಯೆಯನ್ನು ಜೀವಂತವಾಗಿಟ್ಟಿದ್ದವು. ಭಯೋತ್ಪಾದಕತೆ ಹೆಚ್ಚಾಗಲು ಇದೇ ಕಾರಣ ಎಂದು ಆರೋಪಿಸಿದರು. ಪಾಕಿಸ್ತಾನದ ವಿರುದ್ಧ ಹರಿಹಾಯ್ದ ಅವರು, ‘ಮೂರು ಯುದ್ಧಗಳಲ್ಲಿ ಸೋತರೂ ಆ ದೇಶವು ಭಾರತವನ್ನು ಕೆಣಕುತ್ತಿದೆ. ಪಾಕಿಸ್ತಾನವನ್ನು ಮಣ್ಣುಮುಕ್ಕಿಸಲು ಭಾರತದ ಸೇನಾ ಪಡೆಗಳು 10ಕ್ಕಿಂತ ಹೆಚ್ಚು ದಿನ ತೆಗೆದುಕೊಳ್ಳುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT