ಗುರುವಾರ , ಸೆಪ್ಟೆಂಬರ್ 16, 2021
29 °C

ನರೇಂದ್ರ ಮೋದಿಯನ್ನು 'ಡಿವೈಡರ್ ಇನ್ ಚೀಫ್' ಎಂದ ಟೈಮ್ ಮ್ಯಾಗಜಿನ್ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಟೈಮ್ ನಿಯತಕಾಲಿಕ ತಮ್ಮ ಮುಖಪುಟದಲ್ಲಿ ನರೇಂದ್ರ ಮೋದಿಯವರ ಫೋಟೊ ಪ್ರಕಟಿಸಿ, ಡಿವೈಡರ್ ಇನ್ ಚೀಫ್ ಎಂಬ ಶೀರ್ಷಿಕೆ ನೀಡಿದೆ.

ಟೈಮ್‌ನ ಮೇ.20ರ ಸಂಚಿಕೆಯಲ್ಲಿ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ಇನ್ನು ಐದು ವರ್ಷಗಳ ಕಾಲ ಮೋದಿ ಸರ್ಕಾರವನ್ನು ಉಳಿಸಿಕೊಳ್ಳಲಿದೆಯೇ? ಎಂಬುದು ಪ್ರಧಾನ ಲೇಖನ. ಪತ್ರಕರ್ತ ಆತಿಶ್ ತಸೀರ್  ಟರ್ಕಿ, ಬ್ರೆಜಿಲ್, ಬ್ರಿಟನ್, ಅಮೆರಿಕ ಮತ್ತು ಭಾರತದಲ್ಲಿ ರಾಜಕಾರಣಿಗಳ ಜನಪ್ರಿಯತೆ ಬಗ್ಗೆ ಇಲ್ಲಿ ಹೇಳಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಈ ರೀತಿಯ ಜನಪ್ರಿಯತೆಯಲ್ಲಿ ಭಾರತ ಮುಂದಿದೆ ಎಂಬ ವಾಕ್ಯದೊಂದಿಗೆ ಆ ಲೇಖನ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿಯ ಅಧಿಕಾರದಲ್ಲಿ ದೇಶದ ಸಾಮಾನ್ಯ ಪದ್ದತಿಗಳು ಅಂದರೆ ರಾಜ್ಯದ ಆಚಾರಗಳು, ಅಲ್ಲಿನ ಸೃಷ್ಟಿಕರ್ತರು, ಅಲ್ಪ ಸಂಖ್ಯಾತರ ಪ್ರದೇಶ ಮತ್ತು ಸಂಸ್ಥೆಗಳು, ವಿಶ್ವ ವಿದ್ಯಾನಿಲಯಗಳು ಮತ್ತು  ಮಾಧ್ಯಮ ಸಂಸ್ಥೆಗಳಿಗೆ ಹೆಚ್ಚಿನ ಮಟ್ಟದಲ್ಲಿ ಹಾನಿ ಸಂಭವಿಸಿದೆ.

ಮೋದಿ ಅಧಿಕಾರವಧಿಯಲ್ಲಿ ಪ್ರಗತಿಪರರಿಂದ ಹಿಡಿದು ಕೆಳ ಜಾತಿಯವರು, ಮುಸ್ಲಿಂ ಮತ್ತು ಕ್ರೈಸ್ತರ ಮೇಲೆ ದಾಳಿಗಳು ನಡೆದಿವೆ.  2014ರ ಚುನಾವಣೆ ವೇಳೆ ಮೋದಿ ನೀಡಿದ್ದ ಆರ್ಥಿಕ ಭರವಸೆಗಳನ್ನು ಈಡೇರಿಸಲು ಸರ್ಕಾರ ವಿಫಲವಾಗಿದೆ. ಮೋದಿಯವರ ಆರ್ಥಿಕ ಯೋಜನೆಗಳು ಕಾರ್ಯಗತವಾಗುವುದರಲ್ಲಿ ವಿಫಲವಾಗಿದ್ದು ಮಾತ್ರವಲ್ಲ ಭಾರತದಲ್ಲಿ ಧಾರ್ಮಿಕ ವಿಷಯದಲ್ಲಿ ನಂಜಿನ ವಾತಾವರಣ ಸೃಷ್ಟಿಯಾಗಲು ಇದು ಕಾರಣವಾಯಿತು ಎಂದು ಈ ಲೇಖನದಲ್ಲಿದೆ.
  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು