‘ಮೋದಿಯದ್ದು ಅಪ್ಪಟ ಸುಳ್ಳು’– ಕೇರಳ ಸಿಎಂ ಪಿಣರಾಯಿ ವಿಜಯನ್

ಶುಕ್ರವಾರ, ಏಪ್ರಿಲ್ 19, 2019
22 °C

‘ಮೋದಿಯದ್ದು ಅಪ್ಪಟ ಸುಳ್ಳು’– ಕೇರಳ ಸಿಎಂ ಪಿಣರಾಯಿ ವಿಜಯನ್

Published:
Updated:

ತಿರುವನಂತಪುರ: ‘ಶಬರಿಮಲೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಹೇಳುತ್ತಿದ್ದಾರೆ ಮತ್ತು ದೇಶದ ಜನರ ಹಾದಿತಪ್ಪಿಸುತ್ತಿದ್ದಾರೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕೇರಳದಲ್ಲಿ ಅಯ್ಯಪ್ಪ ಮತ್ತು ಶಬರಿಮಲೆ ಹೆಸರು ಹೇಳಿದರೆ ಜೈಲಿಗೆ ಹೋಗಬೇಕಾಗುತ್ತದೆ ಎಂದು ಕರ್ನಾಟಕದಲ್ಲಿ ಶನಿವಾರ ನಡೆದಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದರು. ಇದಕ್ಕೆ ಪಿಣರಾಯಿ ವಿಜಯನ್ ಭಾನುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಇದು ಅಪ್ಪಟ ಸುಳ್ಳು. ಒಬ್ಬ ಪ್ರಧಾನಿ ಇಂತಹ ಹಸಿಸುಳ್ಳುಗಳನ್ನು ಹೇಳುವುದು ಹೇಗೆ ಸಾಧ್ಯ?’ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಶಬರಿಮಲೆ ವಿಚಾರದಲ್ಲಿ ಯಾರನ್ನಾದರೂ ಬಂಧಿಸಿದ್ದರೆ, ಅವರು ಕಾನೂನನ್ನು ಉಲ್ಲಂಘಿಸಿರುವುದೇ ಅದಕ್ಕೆ ಕಾರಣ. ದೇಶದ ಬೇರೆ ರಾಜ್ಯಗಳಲ್ಲಿ ಸಂಘ ಪರಿವಾರದವರಿಗೆ ಮೋದಿಯ ಆಶೀರ್ವಾದವಿರುತ್ತದೆ. ಹೀಗಾಗಿಯೇ ಅಂತಹವರ ವಿರುದ್ಧ ಪ್ರಕರಣಗಳು ದಾಖಲಾಗುವುದಿಲ್ಲ, ಅಂತಹವರು ಜೈಲಿಗೂ ಹೋಗುವುದಿಲ್ಲ. ಆದರೆ ಕೇರಳದಲ್ಲಿ ಅಂಥದ್ದು ನಡೆಯುವುದಿಲ್ಲ. ಇಲ್ಲಿ ಕಾನೂನು ಮುರಿದವರು ಜೈಲಿಗೆ ಹೋಗಲೇಬೇಕು’ ಎಂದು ಅವರು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !