ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ವಿರುದ್ಧ ರಾಹುಲ್‌ ಗಾಂಧಿ ಹೊಸ ಟೀಕಾಸ್ತ್ರ ‘ಮೋದಿ ಲೈ’

‘ಮೋದಿಯ ಸುಳ್ಳುಗಳು’ ಎಂಬ ಪದ ಈಗ ವಿಶ್ವದಾದ್ಯಂತ ಜನಪ್ರಿಯ ಎಂದ ಕಾಂಗ್ರೆಸ್ ಅಧ್ಯಕ್ಷ
Last Updated 16 ಮೇ 2019, 11:25 IST
ಅಕ್ಷರ ಗಾತ್ರ

ನವದೆಹಲಿ: ‘ಮೋದಿ ಲೈ’ (ಮೋದಿಯ ಸುಳ್ಳುಗಳು) ಎಂಬ ಪದ ಈಗ ವಿಶ್ವದಾದ್ಯಂತ ಜನಪ್ರಿಯತೆ ಪಡೆದುಕೊಂಡಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸುಳ್ಳುಗಳನ್ನೇ ಹೇಳುತ್ತಾರೆ ಎಂದು ಆರೋಪಿಸಿರುವ ರಾಹುಲ್‌, ‘ಮೋದಿ ಲೈಸ್‌ (ModiLies)’ ಹೆಸರಿನ ವೆಬ್‌ಸೈಟ್‌ನ ಲಿಂಕ್‌ ಅನ್ನು ಟ್ವೀಟ್ ಮಾಡಿದ್ದಾರೆ. ಮೋದಿ ಅವರ ಅನೇಕ ‘ಸುಳ್ಳು’ ಹೇಳಿಕೆಗಳನ್ನು ವೆಬ್‌ಸೈಟ್‌ ಪಟ್ಟಿ ಮಾಡಿದೆ ಎಂದಿದ್ದಾರೆ.

ರಫೇಲ್‌ ಯುದ್ಧ ವಿಮಾನಗಳ ಖರೀದಿ ಒಪ್ಪಂದವೂ ಸೇರಿದಂತೆ ವಿವಿಧ ವಿಷಯಗಳ ಕುರಿತು ಮೋದಿ ಸುಳ್ಳು ಹೇಳುತ್ತಿದ್ದಾರೆ ಎಂದು ರಾಹುಲ್‌ ಗಾಂಧಿ ಆಗಾಗ್ಗೆ ಆರೋಪಿಸಿದ್ದರು.

‘ಮೋದಿ ಲೈ ಎಂಬುದು ಪದಕೋಶವನ್ನುಸೇರಿರುವ ಹೊಸ ಶಬ್ಧ’ ಎಂದು ಬಣ್ಣಿಸಿರುವ ಅವರು, ಶಬ್ಧದ ಅರ್ಥವನ್ನು ವಿವರಿಸುವವ ಶಬ್ಧಕೋಶವೊಂದರ ಫೋಟೊಶಾಪ್‌ ಮಾಡಲಾದ ಪೇಜ್‌ನ ಚಿತ್ರವನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ಪುಟವು ಮೋದಿ ಲೈ ಪದದ ಮೂರು ಭಿನ್ನ ಅರ್ಥಗಳನ್ನು ಒಳಗೊಂಡಿದೆ. ‘ಮೋದಿ ಲೈ’ ಅನ್ನು ಸಮೂಹ ನಾಮಪದ ಎಂದೂ ಬಣ್ಣಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT