ಮಂಗಳವಾರ, ಏಪ್ರಿಲ್ 7, 2020
19 °C
ಪೂರ್ಣ ಪ್ರೀಮಿಯಂ ಪಾವತಿಗೆ ಸಿಆರ್‌ಪಿಎಫ್ ನಿರ್ಧಾರ

ಹುತಾತ್ಮ ಸಿಆರ್‌ಪಿಎಫ್ ಯೋಧರ ಕುಟುಂಬಕ್ಕೆ ಸಮಗ್ರ ಆರೋಗ್ಯ ರಕ್ಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕರ್ತವ್ಯದ ವೇಳೆ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಸಮಗ್ರ ಆರೋಗ್ಯ ರಕ್ಷಣೆ ಒದಗಿಸಲು ಕೇಂದ್ರೀಯ ಮೀಸಲು ಅರೆಸೇನಾಪಡೆ (ಸಿಆರ್‌ಪಿಎಫ್) ನಿರ್ಧರಿಸಿದೆ. 

ದೇಶದ ಅತಿದೊಡ್ಡ ಅರೆಸೇನಾಪಡೆಯ 2,200 ಯೋಧರು ಈವರೆಗೆ ಹುತಾತ್ಮರಾಗಿದ್ದು, ಅವರ ಎಲ್ಲ ಕುಟುಂಬ ಸದಸ್ಯರ ಆರೋಗ್ಯ ವಿಮೆ ಪ್ರೀಮಿಯಂ ಅನ್ನು ಪಾವತಿಸಲಿದೆ. 81ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ‘ಯೋಧರು ನಮ್ಮ ಹೆಮ್ಮೆ, ಅವರ ಶೌರ್ಯವನ್ನು ಸಂಭ್ರಮಿಸೋಣ’ ಎನ್ನುವ ಆಶಯದ ಅಡಿಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. 

‘ದೇಶಕ್ಕಾಗಿ ತಮ್ಮ ಅಮೂಲ್ಯ ಜೀವನ ತ್ಯಾಗ ಮಾಡಿದ ಯೋಧರ ಕುಟುಂಬ ಸದಸ್ಯರಿಗೆ ಸಮಗ್ರ ಆರೋಗ್ಯ ರಕ್ಷೆ ನೀಡುವ ಮೂಲಕ ಆ ಕೊರತೆಯನ್ನು ನೀಗಿಸುವುದು ಯೋಜನೆಯ ಉದ್ದೇಶ. ಕಲ್ಯಾಣ ನಿಧಿಯಿಂದ ವಿಮೆ ಕಂತು ಪಾವತಿಸಲಾಗುವುದು’ ಎಂದು ಸಿಆರ್‌ಪಿಎಫ್ ಡಿಜಿ ಎ.ಪಿ. ಮಹೇಶ್ವರಿ ತಿಳಿಸಿದ್ದಾರೆ.

ಸರ್ಕಾರದ ಆರೋಗ್ಯ ಸೇವೆಯ ಲಾಭ ಪಡೆಯಲು ಮೃತ ಯೋಧನ ಕುಟುಂಬ ಸದಸ್ಯರು ಸ್ವತಃ ಪ್ರೀಮಿಯಂ ಪಾವತಿಸಬೇಕಿತ್ತು. ಇನ್ನು ಮುಂದೆ ಸಿಆರ್‌ಪಿಎಫ್ ಪಾವತಿಸಲಿದೆ. 

ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿಗೆ ತುತ್ತಾದ 40 ಯೋಧರ ಕುಟುಂಬಗಳ ಪರವಾಗಿ ಪೂರ್ಣ ಪ್ರೀಮಿಯಂ ಪಾವತಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಇದನ್ನು ಹುತಾತ್ಮರಾದ ಎಲ್ಲ ಯೋಧರ ಕುಟುಂಬಗಳಿಗೆ ವಿಸ್ತರಿಸಲು ನಿರ್ಧರಿಸಲಾಯಿತು. ಯೋಧರ ಕುಟುಂಬಗಳಿಗೆ ಆರೋಗ್ಯ ಕಾರ್ಡ್ ವಿತರಣೆಯಾಗಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು