ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂತಿದೋ ಮುಂಗಾರು: ಕೇರಳ ತೀರಕ್ಕೆ ಮಾನ್ಸೂನ್ ಮೊದಲ ಚುಂಬನ

Last Updated 8 ಜೂನ್ 2019, 7:15 IST
ಅಕ್ಷರ ಗಾತ್ರ

ನವದೆಹಲಿ: ಕೇರಳ ಕಡಲ ತೀರಕ್ಕೆ ಮುಂಗಾರು ಮಾರುತಗಳು ಶನಿವಾರ ಮುಂಜಾನೆ ಅಪ್ಪಳಿಸಿವೆ. ಮುಂಗಾರು ಆಗಮನವನ್ನು ಹವಾಮಾನ ಇಲಾಖೆ ದೃಢಪಡಿಸಿದೆ. 2016ರಲ್ಲಿಯೂ ಇದೇ ದಿನ ಕೇರಳಕ್ಕೆ ಮುಂಗಾರು ಮಾರುತಗಳು ಪ್ರವೇಶಿಸಿದ್ದವು.ದೇಶದಲ್ಲಿ ಇನ್ನು ಮುಂದಿನ ನಾಲ್ಕು ತಿಂಗಳ ಮಳೆಗಾಲಕ್ಕೆ ಮುಂಗಾರು ಮಾರುತಗಳು ಶ್ರೀಕಾರ ಬರೆದಿವೆ.

‘ಮುಂಗಾರು ಮಾರುತಗಳು ಇಂದು (ಜೂನ್ 8) ಕೇರಳ ಪ್ರವೇಶಿಸಿದವು’ ಎಂದು ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಹೇಳಿದ್ದಾರೆ. ಮುಂಗಾರು ಪ್ರಭಾವದಿಂದ ಕೇರಳದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದೆ.

ಕರ್ನಾಟಕ ರಾಜ್ಯಕ್ಕೆಮುಂಗಾರು ಪ್ರವೇಶ ಎರಡು ದಿನ ತಡವಾಗಲಿದ್ದು, ಜೂ.9 ಅಥವಾ 10ರಂದು ಮುಂಗಾರು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈ ಹಿಂದೆ ತಿಳಿಸಿತ್ತು.ದೆಹಲಿಯಲ್ಲಿ ಜೂನ್ 29ರಿಂದಮುಂಗಾರು ಮಳೆ ಆರಂಭವಾಗಬಹುದು ಎಂದು ಇಲಾಖೆ ಭವಿಷ್ಯ ನುಡಿದಿದೆ.

ಅಲಹಾಬಾದ್‌ನಲ್ಲಿ ಮರಿಯನ್ನು ಸುರಕ್ಷಿತ ತಾಣಕ್ಕೆ ಹೊತ್ತೊಯ್ದ ತಾಯಿ ನಾಯಿ (ಎಎಫ್‌ಪಿ ಚಿತ್ರ)
ಅಲಹಾಬಾದ್‌ನಲ್ಲಿ ಮರಿಯನ್ನು ಸುರಕ್ಷಿತ ತಾಣಕ್ಕೆ ಹೊತ್ತೊಯ್ದ ತಾಯಿ ನಾಯಿ (ಎಎಫ್‌ಪಿ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT