ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6ಕ್ಕೆ ಮುಂಗಾರು ಪ್ರವೇಶ?

Last Updated 2 ಜೂನ್ 2019, 1:05 IST
ಅಕ್ಷರ ಗಾತ್ರ

ನವದೆಹಲಿ: ಕೇರಳ ಕರಾವಳಿಗೆ ಇದೇ 6ರಂದು ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ನಂತರದ ಎರಡು ವಾರಗಳಲ್ಲಿ ಒಡಿಶಾ ತೀರ ಪ್ರದೇಶವನ್ನು ತಲುಪುವ ಸಾಧ್ಯತೆ ಇದೆ ಎಂದು ಇಲಾಖೆಯ ಮಹಾ ನಿರ್ದೇಶಕ ಮೋಹಪಾತ್ರ ಅವರು ಹೇಳಿದ್ದಾರೆ.

ಆದರೆ, ಜೂನ್‌ 7 ರಂದು ಮುಂಗಾರು ಕೇರಳ ಪ್ರವೇಶಿಸಲಿದೆ ಎಂದು ‘ಸ್ಕೈಮೆಟ್‌‘ ಹೇಳಿದೆ.

ಉಷ್ಣಾಂಶ ತೀವ್ರ: ರಾಜಸ್ಥಾನದ ಚುರು ಪಟ್ಟಣದಲ್ಲಿ ಶನಿವಾರ ಉಷ್ಣಾಂಶ 50.8 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ದೆಹಲಿಯಲ್ಲಿ ಗರಿಷ್ಠ ತಾಪಮಾನ 46.6 ಡಿಗ್ರಿ ಸೆಲ್ಸಿಯಸ್‌ ತಲುಪಿದ್ದು, ದೆಹಲಿ ಸೇರಿ ಸುತ್ತಮುತ್ತಲ ರಾಜ್ಯದ ಜನತೆಗೆಮುಂದಿನ ಶನಿವಾರದವರೆಗೂ ಬಿಸಿಗಾಳಿ ಎಚ್ಚರಿಕೆಯನ್ನು ಇಲಾಖೆ ನೀಡಿದೆ.

ಪೂರ್ವ ದೆಹಲಿಯ ಕಾಮನ್‌ವೆಲ್ತ್‌ ಗೇಮ್ಸ್‌ ವಿಲೇಜ್‌ನಲ್ಲಿ ದಾಖಲಾದ ಈ ತಾಪಮಾನ ವಾಡಿಕೆಗಿಂತ 6 ಡಿಗ್ರಿ ಸೆಲ್ಸಿಯಸ್‌ ಅಧಿಕವಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಹವಾಮಾನ ವೈಪರಿತ್ಯವನ್ನು ತೀವ್ರತೆಗೆ ಅನುಗುಣವಾಗಿ ಹಸಿರು, ಹಳದಿ ಹಾಗೂ ಕೆಂಪು ಹೀಗೆ ಮೂರು ಬಣ್ಣಗಳಲ್ಲಿ ಇಲಾಖೆ ವಿಂಗಡಿಸುತ್ತದೆ. ಸದ್ಯ ಬಿಸಿಗಾಳಿ ತೀವ್ರತೆ ಅಧಿಕವಾಗಿರುವ ಹಿನ್ನೆಲೆಯಲ್ಲಿ ಕೆಂಪು ಬಣ್ಣದಲ್ಲಿ ಈ ರಾಜ್ಯಗಳನ್ನು ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT