ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೋದಿಂದ ಭೂ ಪರಿವೀಕ್ಷಣೆ ಉಪಗ್ರಹ ರಿಸ್ಯಾಟ್‌–2ಬಿ ಯಶಸ್ವಿ ಉಡಾವಣೆ

Last Updated 22 ಮೇ 2019, 1:54 IST
ಅಕ್ಷರ ಗಾತ್ರ

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಭೂ ಪರಿವೀಕ್ಷಣೆ ಉಪಗ್ರಹ ರಿಸ್ಯಾಟ್‌–2ಬಿ ಅನ್ನುಬುಧವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಭೂಸ್ಥಿರ ಉಪಗ್ರಹ ಉಡಾವಣೆವಾಹನ(ಪಿಎಸ್‌ಎಲ್‌ವಿಸಿ-46)ದ ಮೂಲಕರಿಸ್ಯಾಟ್‌–2ಬಿ ಉಪಗ್ರಹವನ್ನು ಉಡಾವಣೆ ಮಾಡಲಾಯಿತು.

ಇದು ಭಾರತೀಯ ರಕ್ಷಣ ಪಡೆಗೆ ಸಂಬಂಧಿಸಿದ ಉಪಗ್ರಹವಾಗಿದೆ. ಭಾರತೀಯ ಗಡಿಯ ಮೇಲೆ ಈ ಉಪಗ್ರಹ ಕಣ್ಗಾವಲು ಇಡಲಿದೆ ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.

ರೇಡಾರ್‌ ಇಮೇಜಿಂಗ್‌ ಉಪಗ್ರಹ ರಿಸ್ಯಾಟ್‌-2ಬಿ615 ಕೆಜಿ ತೂಕವಿದೆ.ಭೂಮಿಯಿಂದ 557 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಇದು ಕಾರ್ಯಾಚರಣೆ ನಡೆಸಲಿದೆ.

ರಿಸ್ಯಾಟ್‌ ಸರಣಿಯ ರಿಸ್ಯಾಟ್‌-1, ರಿಸ್ಯಾಟ್‌-2 ಉಪಗ್ರಹಗಳನ್ನು ಇಸ್ರೋ ಈ ಹಿಂದೆ ಹಾರಿಬಿಟ್ಟಿತ್ತು. ಬಾಲಕೋಟ್‌ ದಾಳಿಯ ಚಿತ್ರಗಳನ್ನು ತೆಗೆಯುವಲ್ಲಿರಿಸ್ಯಾಟ್‌ ಉಪಗ್ರಹಗಳ ರೇಡಾರ್‌ಗಳು ಯಶಸ್ವಿಯಾಗಿರಲಿಲ್ಲ. ಇದರಿಂದ ರಿಸ್ಯಾಟ್‌–2ಬಿ ಉಪಗ್ರಹವನ್ನು ತಯಾರಿಸಿ ಭೂಕಕ್ಷೆಗೆಹಾರಿ ಬಿಡಲಾಗಿದೆ.

ರಿಸ್ಯಾಟ್‌-1 ಮತ್ತು ರಿಸ್ಯಾಟ್‌-2ಉಪಗ್ರಹಗಳಿಗಿಂತ ಇದು ಹೆಚ್ಚು ಶಕ್ತಿಶಾಲಿಯಾಗಿದೆ.ಮೋಡಗಳು ಕವಿದಿದ್ದರೂ ನಿಖರವಾಗಿ ಚಿತ್ರಗಳನ್ನು ತೆಗೆದು ರವಾನೆ ಮಾಡುವ ಸಾಮರ್ಥ್ಯವನ್ನು ಈ ಉಪಗ್ರಹ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT