ಬುಧವಾರ, ಏಪ್ರಿಲ್ 1, 2020
19 °C

ಜನತಾ ಕರ್ಫ್ಯೂ ಪ್ರತಿಜ್ಞೆ ಸ್ವೀಕರಿಸಿದವರ ಸಂಖ್ಯೆ 4 ಲಕ್ಷಕ್ಕಿಂತಲೂ ಹೆಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Janata curfew

ನವದೆಹಲಿ: ಭಾನುವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿರುವ ಜನತಾ ಕರ್ಫ್ಯೂ ಆರಂಭವಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕೊರೊನಾ ವೈರಸ್ ವಿರುದ್ಧ ಹೋರಾಡುವುದಕ್ಕಾಗಿ ಒಂದು ದಿನದ ಮಟ್ಟಿಗೆ ಜನರು ತಮ್ಮ ಮನೆಯಲ್ಲಿರುವಂತೆ ಪ್ರಧಾನಿ ಹೇಳಿದ್ದು ಜನತಾ ಕರ್ಫ್ಯೂಗೆ ಆಹ್ವಾನ ನೀಡಿದ್ದರು.
 ಜನತಾ ಕರ್ಫ್ಯೂನಲ್ಲಿ ಜನರ ಪಾಲ್ಗೊಳ್ಳುವಿಕೆ ಬಗ್ಗೆ ಮಾಹಿತಿಗೋಸ್ಕರ ಕೇಂದ್ರ ಸರ್ಕಾರ https://pledge.mygov.in/janatacurfew/  ಎಂಬ ಪೇಜ್ ತೆರೆದಿದೆ.

 ಜನತಾ ಕರ್ಫ್ಯೂ ಪಾಲಿಸುವವರು ಇಲ್ಲಿ ಪ್ರತಿಜ್ಞೆ ಸ್ವೀಕಾರ ಮಾಡಬಹುದಾಗಿದೆ.  ಇಲ್ಲಿಯವರೆಗೆ 4 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಪ್ರತಿಜ್ಞೆ ಸ್ವೀಕರಿಸಿದ್ದಾರೆ. ಜನತಾ ಕರ್ಫ್ಯೂನಲ್ಲಿ  ಭಾಗಿಯಾಗಿದ್ದರೆ ಪ್ರಮಾಣ ಪತ್ರವನ್ನೂ ಇಲ್ಲಿ ನೀಡಲಾಗುತ್ತದೆ. ಪ್ರಮಾಣ ಪತ್ರವನ್ನು ನಿಮ್ಮ ಮೊಬೈಲ್‌ಗೆ ಕಳುಹಿಸುವ ಮತ್ತು ಡೌನ್‍ಲೋಡ್  ಮಾಡುವ ವ್ಯವಸ್ಥೆಯೂ ಇಲ್ಲಿದೆ .

ಪ್ರತಿಜ್ಞೆ ಸ್ವೀಕರಿಸಿದ ಜನರ ವಯಸ್ಸಿನ ಆಧಾರದಲ್ಲಿ, ಲಿಂಗದ ಆಧಾರದಲ್ಲಿ, ರಾಜ್ಯವಾರು ವಿಂಗಡಿಸಿರುವ ಮಾಹಿತಿಯೂ ಇಲ್ಲಿದೆ. ಇಲ್ಲಿಯವರೆಗೆ ಜನತಾ ಕರ್ಫ್ಯೂನಲ್ಲಿ ಪಾಲ್ಗೊಂಡಿರುವುದಾಗಿ ಪ್ರತಿಜ್ಞೆ ಸ್ವೀಕರಿಸಿದವರಲ್ಲಿ ಶೇ.70.4 ರಷ್ಟು ಮಂದಿ 25-45 ವಯಸ್ಸಿನವರಾಗಿದ್ದಾರೆ. ಲಿಂಗಾಧಾರಿತ ಚಾರ್ಟ್ ನೋಡಿದರೆ ಶೇ.71.8 ರಷ್ಟು ಗಂಡಸರು ಇದರಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯವಾರು ವಿಂಗಡಣೆಯಲ್ಲಿ ಮಹಾರಾಷ್ಟ್ರದಲ್ಲಿ ಹೆಚ್ಚು ಮಂದಿ (ಶೇ.30) ಭಾಗವಹಿಸಿದ್ದಾರೆ. ಕರ್ನಾಟಕದಲ್ಲಿ ಶೇ.7.8 ಮಂದಿ ಭಾಗವಹಿಸಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು