ಶಾಲೆಗಳಲ್ಲಿ ಬೆಳಗ್ಗಿನ ಪ್ರಾರ್ಥನೆ ಕಡ್ಡಾಯ

7

ಶಾಲೆಗಳಲ್ಲಿ ಬೆಳಗ್ಗಿನ ಪ್ರಾರ್ಥನೆ ಕಡ್ಡಾಯ

Published:
Updated:

ಪಟ್ನಾ: ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಬೆಳಗ್ಗಿನ ಪ್ರಾರ್ಥನೆಗೆ ಹಾಜರಾಗುವುದನ್ನು ಬಿಹಾರ ಸರ್ಕಾರ ಕಡ್ಡಾಯಗೊಳಿಸಿದೆ. ಮಕ್ಕಳು ಶಿಸ್ತು ಮತ್ತು ಸಮಯಪಾಲನೆಯನ್ನು ರೂಢಿಸಿಕೊಳ್ಳಲು ಅನುವಾಗುವಂತೆ, ಧ್ವನಿವರ್ಧಕ ಬಳಸಿ ರಾಜ್ಯಗೀತೆಯನ್ನು ಹಾಡಿಸಬೇಕು ಎಂದು ತಿಳಿಸಿದೆ.

ಜೊತೆಗೆ ಈ ಸಂದರ್ಭದಲ್ಲಿ, ನೈತಿಕ ಮೌಲ್ಯಗಳು, ಸ್ಫೂರ್ತಿದಾಯಕ ಕಥೆಗಳು, ದಿನಪತ್ರಿಕೆಗಳಲ್ಲಿನ ಸುದ್ದಿಗಳನ್ನು ಓದಿ ಹೇಳಬೇಕು ಎಂದು ಸಹ ಆದೇಶ ಸೂಚಿಸಿದೆ.

76 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಶಾಲೆಗಳಲ್ಲಿ ಕೂಡಲೇ ಈ ನಿಯಮ ಜಾರಿಗೊಳಿಸಬೇಕು ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಆರ್.ಕೆ. ಮಹಾಜನ್‌ ಅವರು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಇತ್ತೀಚೆಗೆ ಆದೇಶ ಹೊರಡಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !