ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಷ್ಟದಲ್ಲಿರುವ ಮಕ್ಕಳನ್ನು ಮಾತನಾಡಲು ಪ್ರೇರೇಪಿಸಿ: ಮಕ್ಕಳ ಕಲ್ಯಾಣ ಸಚಿವಾಲಯ

Last Updated 1 ಸೆಪ್ಟೆಂಬರ್ 2018, 18:36 IST
ಅಕ್ಷರ ಗಾತ್ರ

ನವದೆಹಲಿ: ಮಕ್ಕಳ ತುರ್ತು ಸಹಾಯವಾಣಿಗೆ ಕರೆ ಮಾಡುವ ಮಕ್ಕಳು ಒಂದು ವೇಳೆ ಮೌನವಾಗಿದ್ದಲ್ಲಿ, ಮಾತನಾಡುವಂತೆ ಅವರನ್ನು ಪ್ರೇರೇಪಿಸಬೇಕು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಸೂಚನೆ ನೀಡಿದೆ.

ಕರೆ ಮಾಡಿದ ಮೂವರ ಪೈಕಿ ಒಂದು ಮಗು (ಸೈಲೆಂಟ್ ಅಥವಾ ಮ್ಯೂಟೆಡ್ ಕಾಲ್) ಮಾತನಾಡದೇ ಮೌನವಾಗಿತ್ತು ಎಂದು ಇತ್ತೀಚೆಗೆಸಹಾಯವಾಣಿ ಪ್ರತಿಷ್ಠಾನವು ವರದಿ ಮಾಡಿತ್ತು.

‘ಸಹಾಯವಾಣಿಗೆ ಕರೆ ಮಾಡುವ ಮಗು ಭಯದಿಂದ ಮಾತನಾಡದೇ ಇರಬಹುದು. ತನ್ನ ಹತ್ತಿರದ ಸಂಬಂಧ ವಿರುದ್ಧವಾಗಿ ದೂರು ನೀಡುವುದೋ ಬಿಡುವುದೋ ಎಂಬ ಗೊಂದಲದಲ್ಲಿ ಇರಬಹುದು. ಅಂತಹ ಮಕ್ಕಳಿಗೆ ಮಾತನಾಡಲು ಧೈರ್ಯ ತುಂಬಿ’ ಎಂದು ಸಹಾಯವಾಣಿಗೆ ನಿರ್ದೇಶನ ನೀಡಲಾಗಿದೆ.

ಅಂಕಿ–ಅಂಶ:
450
ದೇಶದಾದ್ಯಂತ ಇರುವ ಮಕ್ಕಳ ಸಹಾಯವಾಣಿ ಸಂಪರ್ಕ ಕೇಂದ್ರಗಳು

3.4 ಕೋಟಿ
ತುರ್ತು ಸಹಾಯವಾಣಿ ಸ್ವೀಕರಿಸಿದ ಕರೆಗಳು

1 ಕೋಟಿ
ಮಾತನಾಡದೇ ಕಡಿತಗೊಂಡ ಕರೆಗಳು

6.6 ಲಕ್ಷ
ದೌರ್ಜನ್ಯದ ವಿರುದ್ಧದೂರು ನೀಡಿದ ಕರೆಗಳು

31 ಸಾವಿರ
ಮಕ್ಕಳ ನಾಪತ್ತೆ ಕುರಿತ ದೂರುಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT