ಬಿಜೆಪಿ ಶುರುಮಾಡಿದೆ #5 ವರ್ಷದ ಸವಾಲು

7

ಬಿಜೆಪಿ ಶುರುಮಾಡಿದೆ #5 ವರ್ಷದ ಸವಾಲು

Published:
Updated:

ಬೆಂಗಳೂರು: ಹಳೆಯ ನೆನಪುಗಳನ್ನು ಮೆಲುಕು ಹಾಕುವ ‘#10 ವರ್ಷದ ಚಾಲೆಂಜ್‌’ ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆಗಿದೆ. ಈ ಸವಾಲು ಸ್ವೀಕರಿಸಿದವರೆಲ್ಲ 10 ವರ್ಷಗಳ ಹಿಂದಿನ ತಮ್ಮ ಫೋಟೊವನ್ನು ಈಗಿನದರ ಜೊತೆ ಹೋಲಿಸಿ ಪ್ರಕಟಿಸಿಕೊಳ್ಳುತ್ತಿದ್ದಾರೆ. 

ಇದೇ ರೀತಿ ಬಿಜೆಯೂ ಈ ಸವಾಲು ಸ್ವೀಕರಿಸಿದ್ದು, ತನ್ನದೆಯಾದ ಹೊಸ ಹ್ಯಾಷ್‌ಟ್ಯಾಗ್‌ (#5 ವರ್ಷದ ಸವಾಲು) ರೂಪಿಸಿಕೊಂಡಿದೆ. ಇದರಡಿ 2009 ರಿಂದ 2014ರವರೆಗೆ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಮಾಡಿದ ಕೆಲಸಗಳೊಂದಿಗೆ ತನ್ನ ಕೆಲಸಗಳನ್ನು ಹೋಲಿಸಿಕೊಂಡು ಚಿತ್ರಗಳನ್ನು ಹಂಚಿಕೊಂಡಿದೆ.

ಈ #5 ವರ್ಷದ ಸವಾಲಿನಲ್ಲಿ ಕಾಣುವ ಪ್ರಮುಖ ಅಂಶಗಳೆಂದರೆ ಕುಂಭಮೇಳಕ್ಕೆ ನೀಡುವ ಅನುದಾನ ಸಾಕಷ್ಟು ಹೆಚ್ಚಾಗಿರುವುದು, ಬೋಗಿಬೀಲ್‌ ಸೇತುವೆ ಪೂರ್ಣಗೊಂಡಿರುವುದು, ಆಯುಷ್ಮಾನ್‌ ಭಾರತ ಯೋಜನೆಯಿಂದ ಭಾರತದಲ್ಲಿ ಹೂಡಿಕೆ ಹೆಚ್ಚಾಗಿರುವುದು.. ಹೀಗೆ ಸಾಕಷ್ಟು ಅಂಶಗಳ ಬಗ್ಗೆ ಬಿಜೆಪಿ ಪ್ರಸ್ತಾಪಿಸಿದೆ. 

ಬರಹ ಇಷ್ಟವಾಯಿತೆ?

 • 10

  Happy
 • 2

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !