ಎಂಆರ್‌ಬಿ ಹಗರಣ: ಹಲವೆಡೆ ಸಿಬಿಐ ದಾಳಿ

ಶುಕ್ರವಾರ, ಏಪ್ರಿಲ್ 26, 2019
21 °C

ಎಂಆರ್‌ಬಿ ಹಗರಣ: ಹಲವೆಡೆ ಸಿಬಿಐ ದಾಳಿ

Published:
Updated:

ಶಿಲ್ಲಾಂಗ್‌: ಮೇಘಾಲಯ ಗ್ರಾಮೀಣ ಬ್ಯಾಂಕ್‌ನಲ್ಲಿ (ಎಂಆರ್‌ಬಿ) ನಡೆದ ₹ 14.34 ಕೋಟಿ ಮೊತ್ತದ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪಟ್ಟಣದ ಹಲವೆಡೆ ದಾಳಿ ನಡೆಸಿದೆ. 

ಬ್ಯಾಂಕ್‌ನ ಮಹಾಪ್ರಬಂಧಕರು ಮಾರ್ಚ್‌ 27ರಂದು ನೀಡಿದ ದೂರಿನ ಆಧಾರದಲ್ಲಿ ನಗರ ಹಾಗೂ ಹೊರವಲಯಗಳಲ್ಲಿ ದಾಳಿ ನಡೆಸಲಾಗಿದೆ. ಬ್ಯಾಂಕ್‌ನ ಇವುದ್‌ ಶಾಖೆಯಲ್ಲಿ ಸುಮಾರು 150 ಮಂದಿಗೆ ಅಕ್ರಮವಾಗಿ ಸಾಲ ವಿತರಣೆ ಮಾಡಲಾಗಿದೆ.

ಶಾಖೆಯ ವ್ಯವಸ್ಥಾಪಕರ ಮೂಲಕ ಈ ಕೃತ್ಯ ನಡೆದಿದೆ ಎಂದು ಮಹಾಪ್ರಬಂಧಕರು ದೂರಿನಲ್ಲಿ ಹೇಳಿದ್ದಾರೆ. 

ಶಾಖಾ ವ್ಯವಸ್ಥಾಪಕ ಸಹಿತ ಅಕ್ರಮವಾಗಿ ಸಾಲ ಪಡೆದವರ ಮನೆಗಳ ಮೇಲೆ ದಾಳಿ ನಡೆದಿದೆ.

ಶಾಖಾ ವ್ಯವಸ್ಥಾಪಕರು ಖಾಸಗಿ ಸಾಲಗಾರರೊಂದಿಗೆ ಸೇರಿ ನಗದು ಸಾಲ, ಗೃಹ ನಿರ್ಮಾಣ ಸಾಲ, ಸಾಮಾನ್ಯ ಸಾಲ, ಸಣ್ಣ ಉದ್ಯಮ ಸಾಲ ನೀಡಿದ್ದರು. ಕೊನೆಗೆ ಇದನ್ನು ಮರುಪಾವತಿಸಲಾಗದ ಸಾಲವಾಗಿ (ಎನ್‌ಪಿಎ) ಘೋಷಿಸಲಾಗುತ್ತಿತ್ತು. ಇದರಿಂದ ಬ್ಯಾಂಕ್‌ಗೆ ಅಪಾರ ನಷ್ಟ ಉಂಟಾಗುತ್ತಿತ್ತು ಎಂದು ಬ್ಯಾಂಕ್‌ನ ಮುಖ್ಯ ಜಾಗೃತ ಅಧಿಕಾರಿ ತಿಳಿಸಿದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !