ಭಾನುವಾರ, ಆಗಸ್ಟ್ 25, 2019
26 °C

ಕಾಶ್ಮೀರದಲ್ಲಿ ಧೋನಿ; ಬ್ಯಾಟ್‌ಗೆ ಸಹಿ ಮಾಡುತ್ತಿರುವ ಚಿತ್ರ ವೈರಲ್‌ 

Published:
Updated:

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ(38) ಪ್ರಸ್ತುತ ಕಾಶ್ಮೀರದಲ್ಲಿ ಭಾರತ ಸೇನೆಯೊಂದಿಗೆ ಸೇವೆಯಲ್ಲಿದ್ದಾರೆ. ಅಲ್ಲಿ ಕ್ರಿಕೆಟ್‌ ಬ್ಯಾಟ್‌ಗೆ ಸಹಿ ಮಾಡುತ್ತಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಕ್ರಿಕೆಟ್‌ನಿಂದ ಎರಡು ತಿಂಗಳ ಬಿಡುವು ಪಡೆದುಕೊಂಡಿರುವ ಧೋನಿ ’106 ಟೆರಿಟೋರಿಯಲ್‌ ಆರ್ಮಿ ಬೆಟಾಲಿಯನ್‌(ಪ್ಯಾರಾಚೂಟ್‌ ರೆಜಿಮೆಂಟ್‌)’ನಲ್ಲಿ ಎರಡು ವಾರ ಸೇವೆ ಸಲ್ಲಿಸಲಿದ್ದಾರೆ. ಮಂಗಳವಾರದಿಂದ ಕಾಶ್ಮೀರದ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಲೆಫ್ಟಿನೆಂಟ್‌ ಕರ್ನಲ್‌ ಗೌರವ ಪದವಿ ಹೊಂದಿರುವ ಧೋನಿ, ಆಗಸ್ಟ್‌ 15ರ ವರೆಗೂ ದಕ್ಷಿಣ ಕಾಶ್ಮೀರದ ಘಟಕದಲ್ಲಿ ಇರಲಿದ್ದಾರೆ. ಸೇನೆಯ ಸಮವಸ್ತ್ರದಲ್ಲಿರುವ ಅವರು ಪುಟ್ಟ ಬ್ಯಾಟ್‌ವೊಂದಕ್ಕೆ ಸಹಿ ಮಾಡುತ್ತಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ವಿಮಾನದಲ್ಲಿ ಶ್ರೀನಗರಕ್ಕೆ ತೆರಳುವಾಗಿನ ಫೋಟೊ ಸಹ ಈ ಹಿಂದೆ ವೈರಲ್‌ ಆಗಿತ್ತು. ಸೇನೆಯ ಮೂಲಕ ತರಬೇತಿ ಪಡೆದುಕೊಂಡಿರುವ ಧೋನಿ ನಿಗದಿತ ಕರ್ತವ್ಯಗಳನ್ನು ನಿರ್ವಹಿಸಿದ್ದಾರೆ ಎಂದು ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಭರವಸೆ ವ್ಯಕ್ತಪಡಿಸಿದ್ದರು.

Post Comments (+)