ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ಎನ್‌ಎಲ್‌,ಎಂಟಿಎನ್‌ಎಲ್‌ ವಿಲೀನ: ಹಿರಿಯ ಉದ್ಯೋಗಿಗಳಿಗೆ ವಿಆರ್‌ಎಸ್‌ ಆಯ್ಕೆ

ಕೇಂದ್ರ ಸಚಿವ ಸಂಪುಟ ನಿರ್ಧಾರ
Last Updated 23 ಅಕ್ಟೋಬರ್ 2019, 13:10 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ಸಂಸ್ಥೆಗಳನ್ನು ವಿಲೀಕರಣಗೊಳಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ನಿರ್ಧರಿಸಿದೆ.

'ಬಿಎಸ್‌ಎನ್ಎಲ್‌ ಅಥವಾ ಎಂಟಿಎನ್‌ಎಲ್‌ ಯಾವುದೇ ಸಂಸ್ಥೆಯೂ ಸ್ಥಗಿತಗೊಳ್ಳುವುದಿಲ್ಲ. ಮತ್ತೊಂದು ಸಂಸ್ಥೆಯ ತೆಕ್ಕೆಗೂ ನೀಡುವುದಿಲ್ಲ' ಎಂದುದೂರಸಂಪರ್ಕ ಸಚಿವ ರವಿ ಶಂಕರ್‌ ಪ್ರಸಾದ್‌ ಪ್ರಕಟಿಸಿದ್ದಾರೆ. ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ವಿಲೀನಗೊಳ್ಳಲಿದ್ದು, ಸಂಸ್ಥೆಗಳ ಪುನಶ್ಚೇತನಕ್ಕೆ ಸರ್ಕಾರ ₹29,937 ಕೋಟಿ ವಿನಿಯೋಗಿಸಲಿದೆ ಎಂದಿದ್ದಾರೆ.

ಎರಡೂ ಸಂಸ್ಥೆಗಳು ನಷ್ಟ ಅನುಭವಿಸುತ್ತಿದ್ದು, 2018–19ನೇ ಸಾಲಿನಲ್ಲಿ ಬಿಎಸ್‌ಎನ್‌ಎಲ್‌ ಸಂಸ್ಥೆ ಒಟ್ಟು ನಷ್ಟ ₹13,804 ಕೋಟಿ ಇದೆ. ಬಿಎಸ್‌ಎನ್‌ಎಲ್‌ 1.76 ಲಕ್ಷ ಉದ್ಯೋಗಿಗಳನ್ನು ಹೊಂದಿದೆ. ಸಂಸ್ಥೆಗಳ ಪುನಶ್ವೇತನಕ್ಕೆ ಬಾಂಡ್‌ಗಳ ಮೂಲಕ ₹15,000 ಕೋಟಿ ಹಾಗೂ ಮುಂದಿನ ನಾಲ್ಕು ವರ್ಷಗಳಲ್ಲಿ ಸ್ವತ್ತುಗಳ ಮಾರಾಟದಿಂದ ₹38,000 ಕೋಟಿ ಸಂಗ್ರಹಿಸಲು ಸರ್ಕಾರ ನಿರ್ಧರಿಸಿದೆ.

ಸಂಸ್ಥೆಯ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ(ವಿಆರ್‌ಎಸ್‌) ಆಯ್ಕೆಗಳನ್ನು ಘೋಷಿಸಿದೆ. ಐವತ್ತ ಮೂರೂವರೆ ವರ್ಷಕ್ಕೆ ಸ್ವಯಂ ನಿವೃತ್ತಿ ಪಡೆಯುವವರಿಗೆ ಉಳಿದ ಸೇವಾವಧಿಯವರೆಗೂ ವೇತನದ ಶೇ 125, ಗ್ರಾಚ್ಯುಟಿ ಹಾಗೂ ಪಿಂಚಣಿ ನೀಡುವುದಾಗಿ ಪ್ರಕಟಿಸಿದ್ದಾರೆ. ಸಂಸ್ಥೆಯ ಅರ್ಧದಷ್ಟು ಉದ್ಯೋಗಿಗಳು 53 ವರ್ಷ ವಯಸ್ಸಿನ ಆಸುಪಾಸಿನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT