ಮುಲಾಯಂ ಯಾದವ್ ಪ್ರಧಾನಿ ಮೋದಿಯಂತೆ ಫೇಕ್ ಅಲ್ಲ: ಮಾಯಾವತಿ

ಶುಕ್ರವಾರ, ಮೇ 24, 2019
22 °C

ಮುಲಾಯಂ ಯಾದವ್ ಪ್ರಧಾನಿ ಮೋದಿಯಂತೆ ಫೇಕ್ ಅಲ್ಲ: ಮಾಯಾವತಿ

Published:
Updated:

ಮೈನ್‌ಪುರಿ: ಸಮಾಜವಾದಿ ಪಕ್ಷದ ನಾಯಕರಾದ ಅಖಿಲೇಶ್ ಯಾದವ್ ಮತ್ತು  ಮುಲಾಯಂ ಸಿಂಗ್ ಯಾದವ್ ಜತೆ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ವೇದಿಕೆ ಹಂಚಿಕೊಂಡಿದ್ದಾರೆ. ಶುಕ್ರವಾರ ಉತ್ತರಪ್ರದೇಶದ ಮೈನ್‍ಪುರಿಯಲ್ಲಿ ನಡೆದ ಚುನಾವಣಾ ಕಾರ್ಯಕ್ರಮದಲ್ಲಿ 24 ವರ್ಷಗಳ ರಾಜಕೀಯ ದ್ವೇಷ ಮರೆತು ಮಾಯಾವತಿ ಮತ್ತು ಮುಲಾಯಂ ಸಿಂಗ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. 1995ರಲ್ಲಿ ಇವರಿಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.

ಮೈನ್‌ಪುರ್ ಲೋಕಸಭಾ ಕ್ಷೇತ್ರದಲ್ಲಿ ನಡೆದ ಈ ರ‍್ಯಾಲಿಯಲ್ಲಿ ಭಾಗವಹಿಸಿ ತಮಗೆ ಬೆಂಬಲ ನೀಡಿದ್ದಕ್ಕಾಗಿ ಮುಲಾಯಂ ಸಿಂಗ್ ಅವರು ಮಾಯಾವತಿಗೆ ಧನ್ಯವಾದಗಳನ್ನು ಹೇಳಿದ್ದಾರೆ.

ನಮಗೆ ಅಗತ್ಯ ಸಮಯದಲ್ಲಿ ನೆರವಿಗೆ ನಿಂತ ಮಾಯಾವತಿ ಅವರ ಮೇಲೆ ನಮಗೆ ಅಪಾರ ಗೌರವವಿದೆ. ಅವರು ಇಲ್ಲಿಗೆ ಬಂದು ನನ್ನ ಪರವಾಗಿ ಮತ ಯಾಚಿಸಿದ್ದು ಖುಷಿಯಾಗಿದೆ ಎಂದಿದ್ದಾರೆ ಮುಲಾಯಂ.

1995 ಜೂನ್ 2ರಂದು ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದುದಕ್ಕಾಗಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ಬಿಎಸ್‌ಪಿ ಮುಖ್ಯಸ್ಥೆ ಕಾರ್ಯಕರ್ತರೊಂದಿಗೆ ಠಿಕಾಣಿ ಹೂಡಿದ್ದ ಅತಿಥಿ ಗೃಹಕ್ಕೆ ಬಂದು ದಾಂಧಲೆ ಮಾಡಿದ್ದರು.

ಮುಲಾಯಂ ಸಿಂಗ್ ಅವರ ಮಾತಿಗೆ ಧನ್ಯವಾದ ಹೇಳಿದ  ಮಾಯಾವತಿ, ಮುಲಾಯಂ ಸಿಂಗ್ ಅವರು  ಸಮಾಜವಾದಿ ಪಕ್ಷದಲ್ಲಿ ಎಲ್ಲ ವಿಭಾಗದ ಜನರಿಗೂ ಪ್ರಾತಿನಿಧ್ಯ ನೀಡಿದ್ದಾರೆ. ಅವರು ಹಿಂದುಳಿದ ವರ್ಗದ ಫೇಕ್ ಸದಸ್ಯರಲ್ಲ. ಅವರು ನಿಜವಾಗಿಯೂ ಹಿಂದುಳಿದ ವರ್ಗದವರಾಗಿದ್ದಾರೆ. ಅವರು ಮೋದಿಯಂತೆ ಫೇಕ್ ಅಲ್ಲ ಎಂದಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದಕ್ಕಾಗಿ ಬಿಎಸ್‌ಪಿ ಸಮಾಜವಾದಿ ಪಕ್ಷದೊಂದಿಗೆ ಕೈಜೋಡಿಸಿದೆ ಎಂದು ಮಾಯಾವತಿ ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !