ತಲೆಯ ಮೇಲೆ ಟ್ರಕ್‌ ಚಕ್ರ ಹರಿದರೂ ಬದುಕುಳಿದ ಯುವಕ... ವಿಡಿಯೊ ನೋಡಿ

7

ತಲೆಯ ಮೇಲೆ ಟ್ರಕ್‌ ಚಕ್ರ ಹರಿದರೂ ಬದುಕುಳಿದ ಯುವಕ... ವಿಡಿಯೊ ನೋಡಿ

Published:
Updated:

ಮುಂಬೈ: ಬೈಕ್‌ ಸವಾರರಿಗೆ ಹೆಲ್ಮೆಟ್‌ ಎಷ್ಟು ಪ್ರಾಮುಖ್ಯತೆ ಎಂಬುದನ್ನು ತಿಳಿಸಲು ಮುಂಬೈ ಪೊಲೀಸರು ಭಯಾನಕ ಬೈಕ್ ಅಪಘಾತದ ವಿಡಿಯೊವನ್ನು ಪ್ರಕಟಿಸುವ ಮೂಲಕ ಹೆಲ್ಮೆಟ್‌ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.  

ಜಾಗೃತಿ ಮೂಡಿಸಲು ಯುವಕನೊಬ್ಬ ಬೈಕ್‌ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾದ ವಿಡಿಯೊವನ್ನು ಶೇರ್ ಮಾಡಿದ್ದಾರೆ.

ನಾಗಪುರದ ಐಪಿಎಸ್‌ ಅಧಿಕಾರಿ ರಾಜ್‌ ತಿಲಕ್‌ ರೋಶನ್‌ ಈ ವಿಡಿಯೊವನ್ನು ಟ್ವೀಟ್‌ ಮಾಡಿದ್ದರು. ಇದೇ ವಿಡಿಯೊವನ್ನು ಮುಂಬೈ ಪೊಲೀಸರು ಶೇರ್ ಮಾಡುವ ಮೂಲಕ ಬೈಕ್‌ ಸವಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. 

ಭಯಾನಕ ವಿಡಿಯೊ...

ದೊಡ್ಡದೊಂದು ಟ್ರಕ್‌ ವೇಗವಾಗಿ ಸಾಗುತ್ತಿರುತ್ತದೆ. ಬೈಕ್ ಸವಾರನೊಬ್ಬ ಟ್ರಕ್‌ ಅನ್ನು ಹಿಂದಿಕ್ಕಲು ಹೋಗಿ ಆಯ ತಪ್ಪಿ ಕೆಳಗೆ ಬೀಳುತ್ತಾನೆ. ಕೂಡಲೆ ಟ್ರಕ್‌ನ ಹಿಂಬದಿ ಚಕ್ರಗಳು ಅವನ ಮೇಲೆ ಹರಿಯುತ್ತವೆ. ನೋಡುಗರಿಗೆ ಯುವಕನ ತಲೆ ಜಜ್ಜಿ ಹೋಗಿರಬೇಕು ಎಂದು ಅನಿಸುತ್ತದೆ. ಆದರೆ ಅವನು ಹೆಲ್ಮೆಟ್‌ ಧರಿಸಿದ್ದರಿಂದ ಯಾವುದೇ ಅಪಾಯ ಸಂಭವಿಸುವುದಿಲ್ಲ. ತಲೆಗೆ ಸಣ್ಣ ಪುಟ್ಟ ಗಾಯಗಳು ಸಹ ಆಗದೆ ಆ ಯುವಕ ಪ್ರಾಣಾಪಾಯದಿಂದ ಪಾರಾಗುತ್ತಾನೆ.

ಟ್ರಕ್‌ ಹಿಂಬದಿಯ ಚಕ್ರಗಳ ತಲೆ ಮೇಲೆ ಹರಿದ ಕೆಲವೇ ಸೆಕೆಂಡ್‌ಗಳಲ್ಲಿ ಆ ಯುವಕ ಎದ್ದು ಕುಳಿತುಕೊಳ್ಳುತ್ತಾನೆ. ನಂತರ ಹಾನಿಯಾಗಿರುವ ಹೆಲ್ಮೆಟ್‌ ತೆಗೆದು ನಡೆದಾಡುತ್ತಾನೆ. ಇದು ಸಾಧ್ಯವಾಗಿದ್ದು ಹೆಲ್ಮೆಟ್‌ ಧರಿಸಿದ್ದರಿಂದ ಎಂದು ಮುಂಬೈ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಬೈಕ್‌ ಅಥವಾ ಸ್ಕೂಟರ್ ಸವಾರರು ರಸ್ತೆಗೆ ಇಳಿಯಬೇಕಾದರೆ ಹೆಲ್ಮೆಟ್‌ ಅನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಮುಂಬೈ ಪೊಲೀಸರು ರಣವೀರ್‌ ಸಿಂಗ್‌ ಮತ್ತು ಅಲಿಯಾ ಭಟ್‌ ನಟನೆಯ 'ಗಲ್ಲಿ ಬಾಯ್‌' ಚಿತ್ರದ ದೃಶ್ಯವೊಂದನ್ನು ಟ್ವೀಟ್‌ ಮಾಡಿದ್ದರು. ಇದರಲ್ಲಿ ರಣವೀರ್ ಸಿಂಗ್ ಹೆಲ್ಮೆಟ್‌ ಧರಿಸದೆ ಬೈಕ್‌ ರೈಡ್‌ ಮಾಡುತ್ತೇನೆ ಎಂದು ವಾದಿಸಿದಾಗ ಅಲಿಯಾ ಭಟ್‌ 'ಮರ್‌ ಜಾಯೆಗಾ ತು' (ನೀನು ಸಾಯುತ್ತೀಯ) ಎಂದು ಹೇಳುವ ದೃಶ್ಯವನ್ನು (ಸೃಷ್ಟಿಸಿ) ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !