ರೈಲು ನಿಲ್ದಾಣದಲ್ಲಿ ಕಿಕಿ ನೃತ್ಯ ಮಾಡಿದ್ದ ಯುವಕರಿಗೆ ಕಸ ಗುಡಿಸುವ ಶಿಕ್ಷೆ

7

ರೈಲು ನಿಲ್ದಾಣದಲ್ಲಿ ಕಿಕಿ ನೃತ್ಯ ಮಾಡಿದ್ದ ಯುವಕರಿಗೆ ಕಸ ಗುಡಿಸುವ ಶಿಕ್ಷೆ

Published:
Updated:

ಮುಂಬೈ: ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ಲೋಕಲ್ ರೈಲಿನಿಂದ ಇಳಿದು ಅಪಾಯಕಾರಿ ಕಿಕಿ ನೃತ್ಯ ಮಾಡಿದ್ದ ಮೂವರು ಯುವಕರಿಗೆ ರೈಲ್ವೆ ನ್ಯಾಯಾಲಯ ಮೂರು ದಿನ ನಿಲ್ದಾಣವನ್ನು ಸ್ವಚ್ಛಗೊಳಿಸುವ ಶಿಕ್ಷೆ ನೀಡಿದೆ.

ಮುಂಬೈನ ವಿರಾರ್ ನಿವಾಸಿಗಳಾದ ನಿಶಾಂತ್ ಶಾ (20), ಶ್ಯಾಂ ಶರ್ಮಾ (24) ಮತ್ತು ದೃವ ಶಾ ರೈಲು ನಿಲ್ದಾಣವನ್ನು ಸ್ವಚ್ಛಗೊಳಿಸುವ ಶಿಕ್ಷೆಗೆ ಗುರಿಯಾಗಿದ್ದಾರೆ. 

ಈ ಮೂವರು ಕಳೆದ ವಾರ ಚಲಿಸುತ್ತಿದ್ದ ರೈಲಿನಿಂದ ಇಳಿದು ಕಿಕಿ ಡ್ಯಾನ್ಸ್ ಮಾಡಿದ್ದರು. ಈ ವಿಡಿಯೊವನ್ನು ಯುಟ್ಯೂಬ್‌ಗೆ ಅಪ್‌ಲೋಡ್‌ ಮಾಡಿದ್ದರು. ಒಂದೆರಡು ದಿನಗಳಲ್ಲೇ ಇದನ್ನು 15 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಹಾಗೇ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್‌ ಆಗಿತ್ತು. 

ಈ ವಿಡಿಯೊ ಗಮನಿಸಿದ್ದ ರೈಲ್ವೆ ಪೊಲೀಸರು ಆ ಯುವಕರ ವಿರುದ್ಧ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡು ಅವರ ಪತ್ತೆಗಾಗಿ ತನಿಖೆ ನಡೆಸಿದ್ದರು. ಬುಧವಾರ ಕಿಕಿ ಡ್ಯಾನ್ಸ್ ಮಾಡಿದ್ದ ಯುವಕರನ್ನು ಬಂಧಿಸಿ ರೈಲ್ವೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ಬಗ್ಗೆ ವಿಚಾರಣೆ  ನಡೆಸಿದ ನ್ಯಾಯಾಲಯ ಕೀಕೀ ನೃತ್ಯ ಮಾಡಿದ್ದ ಯುವಕರಿಗೆ ಈ ವಾರದಲ್ಲಿ ಮೂರು ದಿನ ನಿಲ್ದಾಣವನ್ನು ಸ್ವಚ್ಛಗೊಳಿಸುವ ಶಿಕ್ಷೆ  ನೀಡಿದೆ.

ಬೆಳಗ್ಗೆ 11 ರಿಂದ 2 ಗಂಟೆ ಹಾಗೂ ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ನಿಲ್ದಾಣವನ್ನು ಸ್ವಚ್ಛ ಮಾಡಬೇಕು. ಈ ವಾರ ಅವರು ನಿಲ್ದಾಣವನ್ನು ಸ್ವಚ್ಛ ಮಾಡಲಿ, ಇನ್ನು ಹೆಚ್ಚಿನ ಶಿಕ್ಷೆ ನೀಡಬೆಕೋ, ಬೇಡವೋ ಎಂಬುದನ್ನು ನ್ಯಾಯಾಲಯ ಮುಂದಿನ ವಾರ ನಿರ್ಧರಿಸಲಿದೆ ಎಂದು ಕೋರ್ಟ್‌ ಹೇಳಿದೆ. 

ಬರಹ ಇಷ್ಟವಾಯಿತೆ?

 • 6

  Happy
 • 5

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !