ಮುಂಬೈ: ರೈಲ್ವೆ ಮೇಲ್ಸೆತುವೆ ಕುಸಿತ- 6 ಜನರಿಗೆ ಗಾಯ

7

ಮುಂಬೈ: ರೈಲ್ವೆ ಮೇಲ್ಸೆತುವೆ ಕುಸಿತ- 6 ಜನರಿಗೆ ಗಾಯ

Published:
Updated:

ಮುಂಬೈ: ಅಂಧೇರಿ ಉಪನಗರ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಪಾದಚಾರಿ ಮೇಲ್ಸೇತುವೆ ಕುಸಿದು ಆರು ಮಂದಿ ಗಾಯಗೊಂಡಿದ್ದಾರೆ.

ಅಂಧೇರಿ ಪಶ್ಚಿಮ ಭಾಗದಿಂದ ಪೂರ್ವಕ್ಕೆ ಸಂಪರ್ಕ ಕಲ್ಪಿಸುವ ಗೋಖಲೆ ಮೇಲ್ಸೇತುವೆಯ ಪಾದಾಚಾರಿ ಮಾರ್ಗ ಕುಸಿದಿದೆ. ಇದರಿಂದಾಗಿ ಪಶ್ಚಿಮ ರೈಲ್ವೆ ಹಾಗೂ ಬಂದರು ಮಾರ್ಗದ ಸೇವೆಗಳಿಗೆ ಅಡಚಣೆಯಾಗಿದೆ.

ಮಂಗಳವಾರ ಮತ್ತು ಬುಧವಾರ ಮುಂಬೈನಲ್ಲಿ ತೀವ್ರ ಮಳೆಯಾಗುವ ಸಾಧ್ಯತೆಯಿರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸೋಮವಾರವೂ ನಗರದಲ್ಲಿ ಹೆಚ್ಚು ಮಳೆಯಾಗಿತ್ತು. 

ರೈಲ್ವೆ ಇಲಾಖೆ ವಸೈ ರಸ್ತೆಗೆ ರಾಜ್ಯ ರಾಣಿ ಎಕ್ಸ್‌ಪ್ರೆಸ್‌ ಖಾಲಿ ರೈಲನ್ನು ಕಳುಹಿಸಿದ್ದು, ಬೆಳಗ್ಗಿನಿಂದ ರೈಲಿಗಾಗಿ ಕಾಯುತ್ತಿರುವ ಪ್ರಯಾಣಿಕರನ್ನು ದಿವಾ ಮಾರ್ಗವಾಗಿ ವಸೈನಿಂದ ಮುಂಬೈ ತಲುಪಿಸಲಿದೆ. 

ಪಶ್ಚಿಮ ರೈಲ್ವೆ ಸುಮಾರು 200 ಪ್ರಯಾಣಿಕರಿಗೆ ಉಪಹಾರದ ವ್ಯವಸ್ಥೆ ಮಾಡಿತ್ತು. 

ಸಾಂತಾಕ್ರೂಜ್‌ನ ವಾಕೋಲದಲ್ಲಿ ಭಾರೀ ವಾಹನಗಳ ತಡೆಗೆ ನಿರ್ಮಿಸಿರುವ ರೇಲಿಂಗ್‌ಗೆ ಸ್ಥಳೀಯ ಸಾರ್ವಜನಿಕ ಸಾರಿಗೆ ಬೆಸ್ಟ್‌ ಡಬಲ್‌–ಡೆಕ್ಕರ್‌ ಬಸ್‌ ಮೇಲ್ಛಾವಣಿ ಡಿಕ್ಕಿಯಾಗಿದೆ. ಅಪಘಾತದಲ್ಲಿ ಪ್ರಯಾಣಿಕರು ಗಾಯಗೊಂಡಿರುವ ಕುರಿತು ವರದಿಯಾಗಿಲ್ಲ. ಅಂಧೇರಿಯಿಂದ ವಿವಿಧ ಕಡೆಗೆ ಬೆಸ್ಟ್‌ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. 

ದುರಂತ ವಿವರ

* ಬೆಳಿಗ್ಗೆ 7.30 ದುರಂತ ನಡೆದ ಸಮಯ

* ಐವರು ಗಾಯಾಳುಗಳು ಇಬ್ಬರು ಗಂಭೀರವಾಗಿ ಗಾಯಗೊಂಡಿರುವವರು

ಇನ್ನೂ ಮಾಸದ ಕಾಲ್ತುಳಿತ ದುರಂತ

2017ರ ಸೆಪ್ಟೆಂಬರ್ 29ರಂದು ಎಲ್ಫಿನ್‌ಸ್ಟನ್ ರೋಡ್ ರೈಲ್ವೆ ಸೇತುವೆಯಲ್ಲಿ ಕಾಲ್ತುಳಿತ ಉಂಟಾಗಿ 22 ಮಂದಿ ಮೃತಪಟ್ಟಿದ್ದರು. ಸೆತುವೆ ಕುಸಿದಿದೆ ಎಂಬ ವದಂತಿಯ ಕಾರಣ ಕಾಲ್ತುಳಿತ ಸಂಭವಿಸಿತ್ತು. ಪ್ರಯಾಣಿಕರ ಸುರಕ್ಷತೆಯನ್ನು ರೈಲ್ವೆ ಕಡೆಗಣಿಸುತ್ತಿದೆ ಎಂದು ಮುಂಬೈ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆನಂತರ ನಗರದ ಎಲ್ಲಾ ರೈಲ್ವೆ ಪಾದಚಾರಿ ಸೇತುವೆಗಳ ಸ್ಥಿತಿಯನ್ನು ಪರಿಶೀಲಿಸಲು ರೈಲ್ವೆ ಮುಂದಾಗಿತ್ತು. ಹೀಗೆ ಪರಿಶೀಲನೆ ಪಟ್ಟಿಯಲ್ಲಿದ್ದ ಸೇತುವೆಗಳಲ್ಲಿ ಗೋಖಲೆ ಸೇತುವೆಯೂ ಒಂದು.

ಎಲ್ಫಿನ್‌ಸ್ಟನ್ ರೋಡ್ ದುರಂತ ನಡೆದು ಇಷ್ಟು ದಿನ ಕಳೆದರೂ, ಪ್ರಯಾಣಿಕರ ಸುರಕ್ಷತೆಗೆ ರೈಲ್ವೆಯಾಗಲೀ, ಮಹನಾಗರ ಪಾಲಿಕೆಯಾಗಲೀ ಕ್ರಮ ತೆಗೆದುಕೊಂಡಿಲ್ಲ ಎಂಬ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವ್ಯಕ್ತವಾಗಿದೆ.

ಸರ್ಕಾರದ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಕಾಂಗ್ರೆಸ್ ಮತ್ತು ಎನ್‌ಸಿಪಿಗಳು ಆರೋಪಿಸಿವೆ.


ಗಾಯಗೊಂಡವರು

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !