ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾಕ್ಕೆ ಮರಳಿದ ಪರ‍್ರೀಕರ್‌

ಅಮೆರಿಕದಿಂದಲೇ ರಾಜ್ಯದ ಮೇಲೆ ನಿಗಾ
Last Updated 14 ಜೂನ್ 2018, 19:30 IST
ಅಕ್ಷರ ಗಾತ್ರ

ಪಣಜಿ: ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದ ಗೋವಾ ಮುಖ್ಯಮಂತ್ರಿ ಮನೋಹರ ಪರ‍್ರೀಕರ್‌ ಗುರುವಾರ ಇಲ್ಲಿಗೆ ಮರಳಿದರು.

ಮೇದೋಜೀರಕ ಗ್ರಂಥಿ ಉರಿಯೂತಕ್ಕೆ 62 ವರ್ಷದ ಪರ‍್ರೀಕರ್‌, ಈ ವರ್ಷದ ಮಾರ್ಚ್‌ನಲ್ಲಿ ಅಮೆರಿಕಕ್ಕೆ ಹೋಗಿದ್ದರು. ಮೊದಲು ಮುಂಬೈಗೆ ಬಂದ ಅವರು, ಅಲ್ಲಿಂದ ಮತ್ತೊಂದು ವಿಮಾನದಲ್ಲಿ ಪಣಜಿಗೆ ಬಂದರು.

ಫೆ.15ರಂದು ಮುಂಬೈನ ಲೀಲಾವತಿ ಆಸ್ಪತ್ರೆಗೆ ಪರ‍್ರೀಕರ್‌ ಮೊದಲ ಬಾರಿಗೆ ದಾಖಲಾಗಿದ್ದರು. ಅಲ್ಲಿಂದ ಅವರು ಫೆ. 22ರಂದು ಗೋವಾಕ್ಕೆ ವಾಪಸಾಗಿ, ಅದೇ ದಿನ ಬಜೆಟ್‌ ಮಂಡಿಸಿದ್ದರು. ಮತ್ತೆ ಅವರು ಅನಾರೋಗ್ಯಕ್ಕೆ ಒಳಗಾದ್ದರಿಂದ ಸದನದ ಕಲಾಪವನ್ನು ನಾಲ್ಕು ದಿನಗಳಿಗೇ ಮೊಟಕುಗೊಳಿಸಲಾಗಿತ್ತು.

ಬಳಿಕ ಅವರನ್ನು ಫೆ. 25ರಂದು ಗೋವಾ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ನಾಲ್ಕು ದಿನಗಳ ನಂತರ ಆಸ್ಪತ್ರೆಯಿಂದ ಅವರು ಮನೆಗೆ ತೆರಳಿದ್ದರು. ಮತ್ತೊಮ್ಮೆ ಮಾರ್ಚ್‌ 5ರಂದು ಮುಂಬೈಗೆ ತಪಾಸಣೆಗೆ ಹೋಗಿದ್ದ ಪರ‍್ರೀಕರ್‌ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ಕಳುಹಿಸಲಾಗಿತ್ತು.

ಗೋವಾದಿಂದ ತೆರಳುವ ಮೊದಲು, ರಾಜ್ಯದ ಆಡಳಿತಕ್ಕೆ ಸಲಹೆ ನೀಡುವ ಸಲುವಾಗಿ ಸಂ‍ಪುಟ ಸಲಹಾ ಸಮಿತಿಯನ್ನು ಪರ‍್ರೀಕರ್‌ ರಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT