ಅಪರೂಪದ ಕಾಯಿಲೆಗೆ ತುತ್ತಾದ ಮುಷರಫ್: ಆಸ್ಪತ್ರೆಗೆ ದಾಖಲು

ಗುರುವಾರ , ಏಪ್ರಿಲ್ 18, 2019
30 °C

ಅಪರೂಪದ ಕಾಯಿಲೆಗೆ ತುತ್ತಾದ ಮುಷರಫ್: ಆಸ್ಪತ್ರೆಗೆ ದಾಖಲು

Published:
Updated:
Prajavani

ಇಸ್ಲಾಮಾಬಾದ್‌: ‘ಪಾಕಿಸ್ತಾನದ ಮಾಜಿ ಸೇನಾಧಿಕಾರಿ ಪರ್ವೇಜ್‌ ಮುಷರಫ್‌ ಅವರು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ನರಮಂಡಲ ವ್ಯವಸ್ಥೆಯೇ ದುರ್ಬಲವಾಗಿದೆ’ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

‘ಶನಿವಾರ ರಾತ್ರಿ ಮುಷರಫ್‌ ಅವರು ಆಸ್ಪತ್ರೆಗೆ ದಾಖಲಾಗಿದ್ದು, ತುರ್ತು ನಿಗಾ ವಿಭಾಗದಲ್ಲಿ ಚಿಕಿತ್ಸೆ ಕಲ್ಪಿಸಲಾಗುತ್ತಿದೆ. ಅವರ ಪರಿಸ್ಥಿತಿ ಗಂಭೀರವಾಗಿದೆ. ಪೂರ್ಣ ಗುಣಮುಖರಾಗುವ ತನಕ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ’ ಎಂದು ಆಲ್‌ ಪಾಕಿಸ್ತಾನ್‌ ಮುಸ್ಲಿಂ ಲೀಗ್‌ನ ಕಾರ್ಯದರ್ಶಿ ಮೆಹ್ರೇನ್‌ ಆದಂ ಮಲ್ಲಿಕ್‌ ತಿಳಿಸಿದ್ದಾರೆ.

2016ರ ಮಾರ್ಚ್‌ ತಿಂಗಳಿಂದ ಮುಷರಫ್‌ ಅವರು ವೈದ್ಯಕೀಯ ಚಿಕಿತ್ಸೆಗಾಗಿ ಬಂದು ದುಬೈನಲ್ಲಿಯೇ ನೆಲೆಸಿದ್ದಾರೆ.  ಅನಾರೋಗ್ಯ ಹಾಗೂ ಭದ್ರತೆ ಕಾರಣದಿಂದ ದೇಶಕ್ಕೆ ಮರಳಿ ಹಿಂತಿರುಗಲು ನಿರಾಕರಿಸಿದ್ದಾರೆ.

2007ರಲ್ಲಿ ಸಂವಿಧಾನದ ತತ್ವಗಳನ್ನು ಬುಡಮೇಲು ಮಾಡಿ, ದೇಶದಲ್ಲಿ ತುರ್ತುಪರಿಸ್ಥಿತಿ ಜಾರಿಗೊಳಿಸಿದಕ್ಕಾಗಿ ಮುಷರಫ್‌ ದೇಶದ್ರೋಹದ ಪ್ರಕರಣ ಎದುರಿಸುತ್ತಿದ್ದಾರೆ. ನ್ಯಾಯಾಲಯದಲ್ಲಿ ಈ ಪ್ರಕರಣ ಸಾಬೀತಾದರೆ, ಗಲ್ಲುಶಿಕ್ಷೆ ಅಥವಾ ಜೀವಾವಧಿ ಶಿಕ್ಷೆಗೆ ಗುರಿಯಾಗಲಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !