ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ಗೆ ಚಿಂತಾಮಣಿ ಕ್ಲಬ್‌

Last Updated 12 ಮಾರ್ಚ್ 2018, 19:53 IST
ಅಕ್ಷರ ಗಾತ್ರ

ಬೆಂಗಳೂರು: ರೋಹಿತ್ ಕುಮಾರ್‌ (132) ಅವರ ಅಬ್ಬರದ ಶತಕದ ನೆರವಿನಿಂದ ಚಿಂತಾಮಣಿ ಸ್ಪೋರ್ಟ್ಸ್ ಕ್ಲಬ್ ತಂಡ ಇಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ವತಿಯ ಕ್ರಿಕೆಟ್‌ ಟೂರ್ನಿಯಲ್ಲಿ ಸೋಮವಾರ ರಾಯಚೂರಿನ ಸಿಟಿ ಇಲೆವನ್‌ ಕ್ಲಬ್‌ ಎದುರು 81 ರನ್‌ಗಳಿಂದ ಜಯದಾಖಲಿಸಿ ಫೈನಲ್ ಪ್ರವೇಶಿಸಿದೆ.

ಮೊದಲು ಬ್ಯಾಟ್‌ ಮಾಡಿದ ಚಿಂತಾಮಣಿ ತಂಡ 48.2 ಓವರ್‌ಗಳಲ್ಲಿ 272ರನ್‌ ಗಳಿಸಿತು. ಈ ತಂಡದ ರೋಹಿತ್‌ ಅಮೋಘ ಆಟ ಆಡಿದರು. ಸಿಟಿ ಇಲೆವನ್‌ ಬೌಲರ್‌ಗಳನ್ನು ಕಾಡಿದ ಅವರು ಶತಕ ಸಿಡಿಸಿ ಗಮನ ಸೆಳೆದರು. ಗುರಿ ಬೆನ್ನಟ್ಟಿದ ಸಿಟಿ ಇಲೆವನ್‌ ತಂಡ 40.1 ಓವರ್‌ಗಳಲ್ಲಿ 191ರನ್‌ಗಳಿಗೆ ಆಲೌಟ್‌ ಆಯಿತು. ಈ ತಂಡದ ಬ್ಯಾಟ್ಸ್‌ ಮನ್‌ಗಳು ಜಾಫರ್‌ ಅಲಿ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಲ್ಲಲು ವಿಫಲರಾದರು.

ವಲಯ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ತಂಡಗಳು ಹಾಗೂ ಗುಂಪು 1 ಮತ್ತು 2ರಲ್ಲಿ ಚಾಂಪಿಯನ್ ಆದ ತಂಡಗಳು ಇಲ್ಲಿ ಪೈಪೋಟಿ ನಡೆಸಿವೆ.

ಸಂಕ್ಷಿಪ್ತ ಸ್ಕೋರು: ಚಿಂತಾಮಣಿ ಸ್ಪೋರ್ಟ್ಸ್‌ ಅಸೋಸಿಯೇಷನ್‌,ಚಿಂತಾಮಣಿ: 48.2 ಓವರ್‌ಗಳಲ್ಲಿ 272 (ರೋಹಿತ್ ಕುಮಾರ್‌ 132, ಡೆಸ್ಮಂಡ್‌ ಅಂಥೋಣಿ 86, ಎನ್‌.ಶರಬಣ್ಣ 25ಕ್ಕೆ4, ಮಹಾಂತೇಶ್‌ 50ಕ್ಕೆ3). ಸಿಟಿ ಇಲೆವನ್‌ ಕ್ಲಬ್‌,ರಾಯಚೂರು:40.1 ಓವರ್‌ಗಳಲ್ಲಿ 191 (ಎನ್‌.ರಾಘವೇಂದ್ರ 33, ಎಮ್‌.ವಿಜಯ್‌ 25, ಅಜಯ್‌ ಗೌಡ 21; ಪ್ರಣವ್ ಭಾಟಿಯಾ 39ಕ್ಕೆ2, ಜಾಫರ್ ಅಲಿ 30ಕ್ಕೆ3). ಫಲಿತಾಂಶ: ಚಿಂತಾಮಣಿ ತಂಡಕ್ಕೆ 81 ರನ್‌ಗಳ ಜಯ;

ಉಲ್ಲಾಳ ಅಕಾಡೆಮಿ: 41.4 ಓವರ್‌ಗಳಲ್ಲಿ 180 (ನಿಹಾಲ್‌ ಉಲ್ಲಾಳ 38, ವಿಕ್ರಂ 28, ತಿಲಕ್ ಶೆಟ್ಟಿ ಅಜೇಯ 20, ಮಹಮ್ಮದ್‌ ರಫೀಕ್‌ 66ಕ್ಕೆ2, ರಾಮ್‌ ಸೇವಕ್‌ 35ಕ್ಕೆ2, ಶಾಹಿದ್ ಅಲಿ 40ಕ್ಕೆ3, ಶ್ರೀನಿವಾಸ್‌ 24ಕ್ಕೆ2). ವಿಜಯನಗರ ಕ್ಲಬ್‌, ತುಮಕೂರು: 29.5 ಓವರ್‌ಗಳಲ್ಲಿ 91 (ರಿಯಾಜ್‌ 26, ಅಕ್ಷಯ್‌ ಬಲ್ಲಾಳ್‌ 12ಕ್ಕೆ6). ಫಲಿತಾಂಶ: ಉಲ್ಲಾಳ ಅಕಾಡೆಮಿಗೆ 89ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT