ಭದ್ರತಾ ನೀತಿಯಲ್ಲಿ ನಮ್ಮನ್ನೂ ಒಳಗೊಳ್ಳಿ: ಮುಸ್ಲಿಮರ ಮನವಿ

7

ಭದ್ರತಾ ನೀತಿಯಲ್ಲಿ ನಮ್ಮನ್ನೂ ಒಳಗೊಳ್ಳಿ: ಮುಸ್ಲಿಮರ ಮನವಿ

Published:
Updated:
Deccan Herald

ನವದೆಹಲಿ: ರಾಷ್ಟ್ರೀಯ ಭದ್ರತಾ ನೀತಿಯಲ್ಲಿ ಮುಸ್ಲಿಂ ಸಮುದಾಯದ ಯುವಜನರನ್ನು ಸಹ ಸೇರಿಸಿಕೊಳ್ಳಬೇಕು ಎಂದು ಭಾರತೀಯ ಮುಸ್ಲಿಂ ವಿದ್ಯಾರ್ಥಿಗಳ ಸಂಘಟನೆ (ಎಂಎಸ್‌ಒಐ) ಕೇಂದ್ರಕ್ಕೆ ಮನವಿ ಮಾಡಿದೆ.

ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ವಿದ್ವಾಂಸರು ಹಾಗೂ ಯುವಜನರು,ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.

ದೇಶದ ಭದ್ರತೆ, ಸಾಮಾಜಿಕ ನ್ಯಾಯ, ಭಯೋತ್ಪಾದನೆ, ಮೂಲಭೂತವಾದಿತ್ವ, ಉದ್ಯೋಗ ಹಾಗೂ ಕೌಶಲ ನಿರ್ವಹಣೆ, ಸಾಮಾಜಿಕ ಕಾರ್ಯಕ್ರಮಗಳು, ಪರಿಸರ ವಿಷಯಗಳ ಕುರಿತು ಸಮಾವೇಶದಲ್ಲಿ ಆರು ಅಂಶಗಳ ವರದಿ ಮಂಡಿಸಲಾಯಿತು. 

ಗಂಭೀರ ಅಪಾಯ: ಭಯೋತ್ಪಾದನೆಗೆ ಕಾರಣವಾಗಿರುವ ಕೆಲವು ಮೂಲಭೂತ ತತ್ವಸಿದ್ಧಾಂತಗಳಿಂದಾಗಿ ದೇಶ ಹಾಗೂ ವಿಶ್ವವೇ ಗಂಭೀರ ಅಪಾಯ ಎದುರಿಸುತ್ತಿದೆ ಎಂದು, ಅಧ್ಯಕ್ಷತೆ ವಹಿಸಿದ್ದ ತಂಜೀಮ್ ಉಲಾಮಾ–ಎ–ಇಸ್ಲಾಂ ಅಧ್ಯಕ್ಷ ಮುಫ್ತಿ ಅಶ್ಫಖ್‌ ಹುಸೇನ್‌ ಹೇಳಿದರು. 

‘ಆಡಳಿತದಲ್ಲಿ ಮುಸ್ಲಿಮರನ್ನು ಒಳಗೊಳ್ಳುವುದಕ್ಕಿಂತ ಹೆಚ್ಚಾಗಿ ಕಾರ್ಯ ನೀತಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು. ಇದರಿಂದಾಗಿ ಮುಸ್ಲಿಮರ ದೇಶಪ್ರೇಮ ಮತ್ತಷ್ಟು ಹೆಚ್ಚುತ್ತದೆ’ ಎಂದರು.

ಸೂಫಿ ಸಿದ್ಧಾಂತ: ‘ವಿವಿಧತೆಯಲ್ಲಿ ಏಕತೆ ನೀತಿ ಭಾರತದ ಜೀವನಾಡಿಯಾಗಿದೆ. ಆದ್ದರಿಂದ ಕೋಮುಶಕ್ತಿಗಳಿಂದ ದೇಶಕ್ಕೆ ಎದುರಾಗುವ ಸವಾಲುಗಳನ್ನು ನಿರ್ಲಕ್ಷಿಸಬಾರದು. ಮುಸ್ಲಿಮರ ಸೂಫಿ ತತ್ವಸಿದ್ಧಾಂತ ಈ ನಿಟ್ಟಿನಲ್ಲಿ ಅತ್ಯುತ್ತಮವಾದದ್ದು’ ಎಂದು ಸಮಾವೇಶದ ಸಂಚಾಲಕರಾಗಿದ್ದ ‘ಕಂಜುಲ್ ಇಮಾನ್‌’ ಪತ್ರಿಕೆ ಸಂಪಾದಕ ಮೌಲಾನಾ ಝಫ್ರುದ್ದೀನ್ ಬರ್ಕಾತಿ ಎಂದರು.

‘ಅವಕಾಶ ನೀಡಿ’
‘ಭಾರತೀಯ ಮುಸ್ಲಿಮರು ಜವಾಬ್ದಾರಿಯುತ ಪ್ರಜೆಗಳಲ್ಲ ಎನ್ನುವಂತಹ ವಾತಾವರಣ ಸೃಷ್ಟಿಸಲಾಗುತ್ತಿದೆ. ಆದರೆ ದೇಶದ ಒಗ್ಗಟ್ಟಿನಲ್ಲಿ ಮುಸ್ಲಿಮರ ಪಾತ್ರ ತಿಳಿಯಲು ರಾಷ್ಟ್ರೀಯ ಭದ್ರತಾ ನೀತಿಯಲ್ಲಿ ಪಾಲ್ಗೊಳ್ಳಲು ಮುಸ್ಲಿಮರಿಗೆ ಅವಕಾಶ ನೀಡುವುದು ಉತ್ತಮ ಮಾರ್ಗ’ ಎಂದು ಎಂಎಸ್‌ಒಐ ಮಾಜಿ ಅಧ್ಯಕ್ಷ ಸೈಯದ್ ಮೊಹಮ್ಮದ್ ಖಾದ್ರಿ ಹೇಳಿದರು.

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !