ಶುಕ್ರವಾರ, ಜೂನ್ 18, 2021
24 °C

ಮಹಾರಾಷ್ಟ್ರದಲ್ಲಿ ನಿರ್ಭಯಾ ರೀತಿಯ ಪ್ರಕರಣ: ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ನಾಗಪುರ: ದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣದಂತಹ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ. ‘19 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಆಕೆಯ ಗುಪ್ತಾಂಗದೊಳಗೆ ಕಬ್ಬಿಣದ ಸರಳು ತುರುಕಿದ್ದು ಈ ಪ್ರಕರಣ ಸಂಬಂಧ ಆರೋಪಿ ಯೋಗಿಲಾಲ್‌ ರಂಗದಾಳೆಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ಪರ್ದಿ ಪ್ರದೇಶದಲ್ಲಿ ಜನವರಿ 21ರಂದು ಈ ಪ್ರಕರಣ ನಡೆದಿದ್ದು ಆರೋಪಿ ನೂಲಿನ ಗಿರಣಿವೊಂದರಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದಾರೆ. ಇದೇ ಗಿರಣಿಯಲ್ಲಿ ಸಂತ್ರಸ್ತೆ ಕೆಲಸ ಮಾಡುತ್ತಿದ್ದಾರೆ. ಸಂತ್ರಸ್ತೆ, ಆಕೆಯ ಸಹೋದರ, ಆರೋಪಿ ಹಾಗೂ ಮತ್ತೋರ್ವ ಮಹಿಳೆ ಎಲ್ಲರೂ ಒಂದೇ ಪ್ರದೇಶದಲ್ಲಿ ವಾಸವಾಗಿದ್ದಾರೆ’ ಎಂದು ಮಾಹಿತಿ ನೀಡಿದರು.

ಮನೆಯಲ್ಲಿ ಸಂತ್ರಸ್ತೆ ಒಬ್ಬಳೆ ಇದ್ದ ಸಮಯ ನೋಡಿ, ಆರೋಪಿಯ ಅತ್ಯಾಚಾರ ಎಸಗಲು ಪ್ರಯತ್ನ ನಡೆಸಿದ್ದು. ಇದನ್ನು ವಿರೋಧಿಸಿದ ಮಹಿಳೆಯ ಬಾಯೊಳಗೆ ಬಟ್ಟೆ ತುರುಕಲಾಗಿದೆ. ಸಂತ್ರಸ್ತೆ ಪ್ರಜ್ಞಾಹೀನಳಾದ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಪೊಲೀಸರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು