ಎನ್‌ಟಿಆರ್ ಗೌರವ ಮಣ್ಣುಪಾಲು ಮಾಡಿದ ನಾಯ್ಡ: ಬಿಜೆಪಿ ಟೀಕೆ

7

ಎನ್‌ಟಿಆರ್ ಗೌರವ ಮಣ್ಣುಪಾಲು ಮಾಡಿದ ನಾಯ್ಡ: ಬಿಜೆಪಿ ಟೀಕೆ

Published:
Updated:

ನವದೆಹಲಿ: ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ತೆಲುಗು ದೇಶಂ ಸಂಸ್ಥಾಪಕ ಎನ್.ಟಿ.ರಾಮರಾವ್ ಅವರ ಆಶಯಗಳನ್ನು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಉಲ್ಲಂಘಿಸಿದ್ದಾರೆ. ನಾಯ್ಡು ಪದೇಪದೇ ದೆಹಲಿ ಯಾತ್ರೆ ಮಾಡುವ ಮೂಲಕ ರಾಜಕೀಯ ಪ್ರವಾಸೋದ್ಯಮಕ್ಕೆ ಚಾಲನೆ ನೀಡಿದ್ದಾರೆ ಎಂದು ಬಿಜೆಪಿ ಹರಿಹಾಯ್ದಿದೆ.

‘ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ನಾಯ್ಡು ಸೋಲಿನ ಭೀತಿ ಅನುಭವಿಸುತ್ತಿದ್ದಾರೆ. ಅಲ್ಲಿ ನೆಲೆ ಭದ್ರಪಡಿಸಿಕೊಳ್ಳಲು ಏನು ಮಾಡಬೇಕು ಎಂದು ಯೋಚಿಸದೆ ರಾಜಕೀಯ ಪ್ರವಾಸೋದ್ಯಮ ಮತ್ತು ಫೋಟೊ ಸೆಷನ್‌ಗಾಗಿ ದೆಹಲಿಗೆ ಬರುತ್ತಿದ್ದಾರೆ’ ಎಂದು ಬಿಜೆಪಿ ವಕ್ತಾರ ಶಾನವಾಜ್ ಹುಸೇನ್ ಟೀಕಿಸಿದರು.

‘ದೆಹಲಿಯಿಂದ ನಾಯ್ಡು ಅವರು ಹೈದರಾಬಾದ್ ತಲುಪಿದ ತಕ್ಷಣ ‘ಮಹಾಘಟಬಂಧನ್‌’ ರಚನೆಯ ಎಲ್ಲ ಪ್ರಕ್ರಿಯೆಗಳು ಕುಸಿದುಬೀಳುತ್ತವೆ. ಯಾರಿಂದ ಬೇಕಾದರೂ ಬೆಂಬಲ ಪಡೆಯಲು ಸಿದ್ಧರಿರುವ ರಾಹುಲ್ ಗಾಂಧಿಯನ್ನು ಬೆಂಬಲಿಸುವ ಮೂಲಕ ನಾಯ್ಡು ಅವರು ಆಂಧ್ರದ ಮಹಾನ್ ನೇತಾರ ಎನ್.ಟಿ.ರಾಮರಾವ್ ಅವರ ಸಾಧನೆಗೆ ಕಪ್ಪುಚುಕ್ಕೆ ಇಟ್ಟರು’ ಎಂದು ಹರಿಹಾಯ್ದರು.

ಕಳೆದ ಶನಿವಾರ ಮತ್ತು ಗುರುವಾರ ದೆಹಲಿಯಲ್ಲಿ ನಾಯ್ಡು ಹಲವು ನಾಯಕರನ್ನು ಭೇಟಿಯಾಗಿ 2019ರ ಲೋಕಸಭೆ ಚುನಾವಣೆಗೆ ಮೊದಲು ಮಹಾಘಟಬಂಧನ್ ಸ್ಥಾಪಿಸುವ ಯತ್ನಕ್ಕೆ ಚುರುಕು ನೀಡಲು ಯತ್ನಿಸುತ್ತಿದ್ದಾರೆ. 1980ರ ದಶಕದಲ್ಲಿ ಆಂಧ್ರದಲ್ಲಿ ಕಾಂಗ್ರೆಸ್ ಸೋಲಿಸಬೇಕು ಎಂಬ ಉದ್ದೇಶದಿಂದ ಸ್ಥಾಪನೆಯಾದ ತೆಲುಗು ದೇಶಂ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಜೊತೆಗೆ ಕೈಜೋಡಿಸಿದೆ.

ಬರಹ ಇಷ್ಟವಾಯಿತೆ?

 • 23

  Happy
 • 2

  Amused
 • 0

  Sad
 • 3

  Frustrated
 • 5

  Angry

Comments:

0 comments

Write the first review for this !