ನಮೊ ಟಿವಿ: ಬಿಜೆಪಿಗೆ ನೋಟಿಸ್‌

ಶುಕ್ರವಾರ, ಏಪ್ರಿಲ್ 26, 2019
24 °C

ನಮೊ ಟಿವಿ: ಬಿಜೆಪಿಗೆ ನೋಟಿಸ್‌

Published:
Updated:
Prajavani

ನವದೆಹಲಿ: ತನ್ನ ಪ್ರಮಾಣಪತ್ರ ಇಲ್ಲದೆ ಮೊದಲೇ ರೆಕಾರ್ಡ್‌ ಮಾಡಿದ ಯಾವುದೇ ಕಾರ್ಯಕ್ರಮವನ್ನು ‘ನಮೋ ಟಿ.ವಿ.’ಯಲ್ಲಿ ಬಿತ್ತರಿಸಬಾರದು ಎಂದು ದೆಹಲಿ ಮುಖ್ಯ ಚುನಾವಣಾಧಿಕಾರಿ ಬಿಜೆಪಿಗೆ ಸೂಚನೆ ನೀಡಿದ್ದಾರೆ.

ಮೊದಲೇ ರೆಕಾರ್ಡ್‌ ಮಾಡಿರುವ ಯಾವುದೇ ಕಾರ್ಯಕ್ರಮವನ್ನು ಈ ಚಾನಲ್‌ನಲ್ಲಿ ಪ್ರಸಾರ ಮಾಡುವ ಮುನ್ನ ಅದಕ್ಕೆ ಚುನಾವಣಾ ಆಯೋಗದ ಪ್ರಮಾಣಪತ್ರ ಪಡೆಯುವುದು ಅಗತ್ಯ ಎಂದು ಚುನಾವಣಾ ಆಯೋಗವು ಸೂಚನೆ ನೀಡಿದ ಮರುದಿನವೇ ದೆಹಲಿ ಚುನಾವಣಾ ಆಯುಕ್ತರ ಕಚೇರಿಯಿಂದ ಬಿಜೆಪಿಗೆ ಈ ಸೂಚನೆ ಜಾರಿ ಮಾಡಲಾಗಿದೆ.

‘ನಮೋ ಟಿ.ವಿ.ಯು ಬಿಜೆಪಿ ಪ್ರಾಯೋಜಿತ ವಾಹಿನಿಯಾಗಿರುವುದರಿಂದ ಅದರಲ್ಲಿ ಪ್ರಸಾರವಾಗುವ ಎಲ್ಲ ಕಾರ್ಯಕ್ರಮಗಳಿಗೆ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿಯಿಂದ ಪ್ರಮಾಣಪತ್ರ ಪಡೆಯುವುದು ಅಗತ್ಯ. ವಾಹಿನಿಯು ಪ್ರಸಾರ ಮಾಡುವ ಕಾರ್ಯಕ್ರಮಗಳಲ್ಲಿ ಚುನಾವಣಾ ಪ್ರಚಾರದ ಅಂಶಗಳಿದ್ದರೆ ಅವುಗಳನ್ನು ತೆಗೆದುಹಾಕಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುನ್ನೆಚ್ಚರಿಕೆಯ ಕ್ರಮವಾಗಿ ನಮೋ ಟಿ.ವಿ.ಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು ವೀಕ್ಷಿಸಲು ಇಬ್ಬರು ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !