ನರೇಂದ್ರ ಮೋದಿ ಮಾತಿನ ಮಲ್ಲ: ರಾಹುಲ್‌ ಲೇವಡಿ

7

ನರೇಂದ್ರ ಮೋದಿ ಮಾತಿನ ಮಲ್ಲ: ರಾಹುಲ್‌ ಲೇವಡಿ

Published:
Updated:

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಮಾತಿನ ಮಲ್ಲ’ (ಜುಮ್ಲಾ ರಾಜಾ) ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಛೇಡಿಸಿದ್ದಾರೆ. ಜತೆಗೆ ಮೋದಿ ಆಡಳಿತವನ್ನು ಅರಾಜಕತೆಗೆ (ಚೌಪಟ್‌ ರಾಜ್‌) ಹೋಲಿಸಿದ್ದಾರೆ.

ಈ ಜುಮ್ಲಾ ರಾಜಾನ ಚೌಪಟ್‌ ರಾಜ್ಯದಲ್ಲಿ ಯುವಕರ ಕೈಗಳಿಗೆ ಉದ್ಯೋಗ, ರೈತರ ಬೆಳೆಗೆ ಸೂಕ್ತ ಬೆಲೆ, ಶ್ರಮಜೀವಿಗಳಿಗೆ ಗೌರವ ಸಿಗುತ್ತಿಲ್ಲ ಎಂದು ಬುಧವಾರ ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಪಿಎಚ್‌.ಡಿ ಪದವೀಧರರು ನಾಲ್ಕನೇ ದರ್ಜೆ ನೌಕರಿಗಳಿಗೆ ಅರ್ಜಿ ಹಾಕುವ ಸ್ಥಿತಿಗೆ ನಿರುದ್ಯೋಗ ಸಮಸ್ಯೆ ಉಲ್ಬಣಿಸಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಪ್ರಕಟವಾದ ಮಾಧ್ಯಮ ವರದಿಗಳನ್ನು ಟ್ವೀಟ್‌ ಜತೆ ಹಾಕಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !