ಉತ್ತರಪ್ರದೇಶ: ವಿವಿಧ ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ

ಭಾನುವಾರ, ಮಾರ್ಚ್ 24, 2019
33 °C

ಉತ್ತರಪ್ರದೇಶ: ವಿವಿಧ ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ

Published:
Updated:

ಗ್ರೇಟರ್‌ ನೋಯ್ಡಾ: ದೆಹಲಿ ಹಾಗೂ ನೋಯ್ಡಾ ನಗರಗಳಿಗೆ ಸಂಪರ್ಕ ಕಲ್ಪಿಸುವ ನೋಯ್ಡಾ ನಗರ ಕೇಂದ್ರ ಮತ್ತು ನೋಯ್ಡಾ ಎಲೆಕ್ಟ್ರಾನಿಕ್‌ ಸಿಟಿ ನಡುವಣ 6.6 ಕಿ.ಮೀ ಉದ್ದದ ವಿಸ್ತರಿಸಿದ ಮೆಟ್ರೋ ರೈಲು ಮಾರ್ಗವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಉದ್ಘಾಟಿಸಿದರು.

ಇದೇ ವೇಳೆ ಭಾರತೀಯ ಪುರಾತತ್ವ ಇಲಾಖೆ ವ್ಯಾಪ್ತಿಗೆ ಬರುವ ಪಂಡಿತ್‌ ದೀನದಯಾಳ್‌ ಪುರಾತತ್ವ ಸಂಸ್ಥೆಯನ್ನು ಉದ್ಘಾಟಿಸಿ, ದೀನದಯಾಳ್‌ ಅವರ ಪ್ರತಿಮೆಯನ್ನೂ ಅನಾವರಣಗೊಳಿಸಿದರು.

ಉತ್ತರ ಪ್ರದೇಶದ ಬುಲಂದ್‌ಷಹರ್‌ ಜಿಲ್ಲೆಯ ಖುರ್ಜಾದಲ್ಲಿ ಸೂಪರ್‌ಕ್ರಿಟಿಕಲ್‌ ತಂತ್ರಜ್ಞಾನ ಆಧಾರಿತ ತಲಾ 660 ಮೆಗಾವಾಟ್‌ ಸಾಮರ್ಥ್ಯದ ಎರಡು ವಿದ್ಯುತ್‌ ಉತ್ಪಾದನಾ ಘಟಕಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಬಿಹಾರದ ಬಕ್ಸಾರ್‌ನಲ್ಲಿಯೂ ಇದೇ ಸಾಮರ್ಥ್ಯದ ಎರಡು ವಿದ್ಯುತ್‌ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗುತ್ತಿದ್ದು, ಇವುಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. 

ಕಾರ್ಯಕ್ರಮದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಕೇಂದ್ರ ಸಂಸ್ಕೃತಿ ಇಲಾಖೆ ಸಚಿವ ಮಹೇಶ್‌ ಶರ್ಮಾ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !