ಬುಧವಾರ, ಏಪ್ರಿಲ್ 1, 2020
19 °C
ಒಂದಾಗಿ ಸವಾಲನ್ನು ಗೆಲ್ಲೋಣವೆಂದ ಪ್ರಧಾನಿ

ಇದು ಅಂತ್ಯವಲ್ಲ, ಸುದೀರ್ಘ ಹೋರಾಟ– ಯುದ್ಧ ವಿಜಯದ ಆರಂಭ: ಪ್ರಧಾನಿ ನರೇಂದ್ರ ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

Narendra Modi

ನವದೆಹಲಿ: ‘ಜನತಾ ಕರ್ಫ್ಯೂ ರಾತ್ರಿ 9 ಗಂಟೆಗೆ ಕೊನೆಗೊಳ್ಳಲಿದೆ. ಹಾಗೆಂದು, ನಾವು ಸಂಭ್ರಮಾಚರಣೆ ಮಾಡಬೇಕು ಎಂಬುದು ಇದರ ಅರ್ಥವಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ಜನತಾ ಕರ್ಫ್ಯೂ’ಗೆ ದೇಶದಾದ್ಯಂತ ಉತ್ತಮ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ‘ಇದು ಅಂತ್ಯವಲ್ಲ, ಸುದೀರ್ಘ ಹೋರಾಟ ಮತ್ತು ಯುದ್ಧದಲ್ಲಿ ವಿಜಯದ ಆರಂಭ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ: 

‘ಜನತಾ ಕರ್ಫ್ಯೂ’ ಯಶಸ್ವಿಯಾಯಿತು ಎಂದು ಪರಿಗಣಿಸಬೇಡಿ. ಇದು ಸುದೀರ್ಘ ಹೋರಾಟದ ಪ್ರಾರಂಭವಷ್ಟೆ. ಇಂದು ನಾವು ಸಮರ್ಥರು ಎಂದು ದೇಶವಾಸಿಗಳು ಹೇಳಿದ್ದಾರೆ. ನಾವು ನಿರ್ಧರಿಸಿದರೆ, ನಾವು ಒಟ್ಟಾಗಿ ದೊಡ್ಡ ಸವಾಲನ್ನು ಸೋಲಿಸಬಹುದು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

‘ಇದು ಧನ್ಯವಾದಗಳ ಧ್ವನಿಯಾಗಿದೆ. ಸುದೀರ್ಘ ಯುದ್ಧದಲ್ಲಿ ವಿಜಯದ ಪ್ರಾರಂಭವಾಗಿದೆ. ಈ ಸಂಕಲ್ಪದೊಂದಿಗೆ ಸುದೀರ್ಘ ಯುದ್ಧಕ್ಕಾಗಿ ನಾವು ಈ ದೃಢ ನಿಶ್ಚಯದಿಂದ ಸಾಮಾಜಿಕ ಅಂತರ (Social Distancing) ಕಾಯ್ದುಕೊಳ್ಳುವ ಮೂಲಕ ನಮ್ಮನ್ನು ನಾವು ಗಟ್ಟಿಗೊಳಿಸೋಣ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ವೈರಸ್ ಭೀತಿ: ಮಾರ್ಚ್ 31ರವರೆಗೆ ಮೆಟ್ರೊ ರೈಲು ಸಂಚಾರ ಸಂಪೂರ್ಣ ಸ್ಥಗಿತ

ಕೊರೋನಾ ವೈರಸ್ ವಿರುದ್ಧದ ಹೋರಾಟವನ್ನು ಮುನ್ನಡೆಸಿದ ಪ್ರತಿಯೊಬ್ಬ ವ್ಯಕ್ತಿಗೂ ದೇಶ ಧನ್ಯವಾದ ಅರ್ಪಿಸಿದೆ. ದೇಶವಾಸಿಗಳಿಗೆ ಅನಂತ ಧನ್ಯವಾದಗಳು ಎಂದು ಮೋದಿ ಹೇಳಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಸೂಚನೆಗಳನ್ನು ಅನುಸರಿಸಿ. ಲಾಕ್‌ಡೌನ್ ಘೋಷಿಸಲಾದ ಜಿಲ್ಲೆಗಳು ಮತ್ತು ರಾಜ್ಯಗಳಲ್ಲಿ ಮನೆಗಳನ್ನು ಬಿಟ್ಟು ಹೊರಬರಬೇಡಿ. ತೀರಾ ಅವಶ್ಯಕತೆಯಿಲ್ಲದೆ, ಅನಿವಾರ್ಯತೆಯಿಲ್ಲದೆ ಮನೆಗಳಿಂದ ಹೊರಬರಬೇಡಿ ಎಂದು ಜನತೆಗೆ ಮೋದಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು