ಸೋಮವಾರ, ನವೆಂಬರ್ 18, 2019
25 °C

ತಿರುವನಂತಪುರ: ಕಾರ್ಮಿಕನ ಮೇಲೆ ಹೆಬ್ಬಾವು ದಾಳಿ, ಸ್ವಲ್ಪದರಲ್ಲೇ ಬಚಾವ್

Published:
Updated:

ತಿರುವನಂತಪುರ: ಭಾರೀ ಗಾತ್ರದ ಹೆಬ್ಬಾವು ಕತ್ತನ್ನು ಸುತ್ತಿ, ಇನ್ನೇನು ನುಂಗಿಯೇಬಿಡ್ತು ಅನ್ನುವಷ್ಟರಲ್ಲಿ ಕಾರ್ಮಿಕರೊಬ್ಬರು ಸ್ವಲ್ಪದರಲ್ಲೇ ಬಚಾವ್ ಆದ ಘಟನೆ ಕೇರಳದ ತಿರುವನಂತಪುರ ಬಳಿಯ ನೆಯ್ಯಾರ್ ಎಂಬಲ್ಲಿ ಇತ್ತೀಚೆಗೆ ನಡೆದಿದೆ.

60 ವರ್ಷ ವಯಸ್ಸಿನ ಕಾರ್ಮಿಕ ಭುವನಚಂದ್ರನ್ ಎಂಬವರು ಮಂಗಳವಾರ ಪೊದೆಗಳನ್ನು ತೆರವುಗೊಳಿಸುತ್ತಿದ್ದ ವೇಳೆ ಹಠಾತ್ತಾಗಿ ಹೆಬ್ಬಾವು ದಾಳಿ ಮಾಡಿದೆ. ಸುಮಾರು 10 ಅಡಿ ಉದ್ದದ ಹೆಬ್ಬಾವು ಹಿಡಿತ ಬಿಗಿಯಾಗಿಸುತ್ತಿದ್ದಂತೆ ಅದೃಷ್ಟವಶಾತ್, ಜತೆಗೆ ಕೆಲಸ ಮಾಡುತ್ತಿದ್ದ ಇತರರಿಗೆ ವಿಷಯ ತಿಳಿದಿದೆ. ಕೂಡಲೇ ಧಾವಿಸಿದ ಇತರ ಕಾರ್ಮಿಕರು ಹೆಬ್ಬಾವಿನ ಹಿಡಿತದಿಂದ ಭುವನಚಂದ್ರನ್ ಅವರನ್ನು ರಕ್ಷಿಸಿದ್ದಾರೆ.

ಬಳಿಕ ಹೆಬ್ಬಾವನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

ಪ್ರತಿಕ್ರಿಯಿಸಿ (+)