ಸೋನಿಯಾ, ರಾಹುಲ್‌ ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌

7
ತೆರಿಗೆ ಲೆಕ್ಕಪತ್ರ ಪುನರ್‌ಪರಿಶೀಲನೆಗೆ ಅವಕಾಶ ನೀಡದಿರಲು ಮನವಿ

ಸೋನಿಯಾ, ರಾಹುಲ್‌ ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌

Published:
Updated:

ನವದೆಹಲಿ: 2011–12ನೇ ಸಾಲಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ತೆರಿಗೆ ಲೆಕ್ಕಪತ್ರಗಳ ಪುನರ್‌ಪರಿಶೀಲನೆಗೆ ಆದಾಯ ಇಲಾಖೆಗೆ ಅವಕಾಶ ನೀಡಬಾರದು ಎಂದು ಕೋರಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಸೋಮವಾರ ವಜಾಗೊಳಿಸಿದೆ. 

ಮನವಿಯನ್ನು ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್‌ ಮತ್ತು ಎ.ಕೆ. ಚಾವ್ಲಾ ತಿರಸ್ಕರಿಸಿದರು. ಇದೇ ಮನವಿಯನ್ನು ಸಲ್ಲಿಸಿದ್ದ ಕಾಂಗ್ರೆಸ್ ನಾಯಕ ಆಸ್ಕರ್‌ ಫರ್ನಾಂಡಿಸ್‌ ಅವರ ಅರ್ಜಿಯನ್ನೂ ನ್ಯಾಯಾಲಯ ವಜಾಗೊಳಿಸಿತು.

ಈ ಅವಧಿಯಲ್ಲಿ ರಾಹುಲ್‌ ಗಾಂಧಿ ಸಲ್ಲಿಸಿದ್ದ ಲೆಕ್ಕಪತ್ರಗಳಲ್ಲಿ ವಾಸ್ತವಾಂಶಗಳನ್ನು ಮರೆಮಾಚಿದ್ದು, ಪುನರ್‌ಪರಿಶೀಲಿಸಲು ಅವಕಾಶ ನೀಡಬೇಕು ಎಂದು ಆದಾಯ ತೆರಿಗೆ ಇಲಾಖೆಯು ನ್ಯಾಯಾಲಯವನ್ನು ಕೋರಿತ್ತು.

ಮುಂದಿನ ಆದೇಶ ನೀಡುವವರೆಗೆ ಸೋನಿಯಾ, ರಾಹುಲ್‌ ಹಾಗೂ ಫರ್ನಾಂಡಿಸ್‌ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರಲು ನ್ಯಾಯಾಲಯವು ಆದಾಯ ತೆರಿಗೆ ಇಲಾಖೆಗೆ ಮೌಖಿಕ ಆದೇಶ ನೀಡಿದೆ. ಸೋನಿಯಾ ಅವರ ಪರ ಹಿರಿಯ ವಕೀಲ ಪಿ. ಚಿದಂಬರಂ ಹಾಜರಾಗಿದ್ದರು. 

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕೇಂದ್ರಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌, ಕ್ಷುಲ್ಲಕವಾಗಿ ಈ ರೀತಿ ಸೇಡು ತೀರಿಸಿಕೊಳ್ಳುವ ಬದಲು,ರಾಹುಲ್‌ ಅವರೊಂದಿಗೆ ರಾಜಕೀಯ ಹೋರಾಟ ಮಾಡಿ ತೋರಿಸಿ ಎಂದು ಬಿಜೆಪಿಗೆ ಕಾಂಗ್ರೆಸ್‌ ಸವಾಲು ಹಾಕಿದೆ.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !