ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ವಿಷದ ಜತೆ ಹೋರಾಡುತ್ತಿದ್ದೇವೆ, ಮೋದಿಯೇ ಆ ವಿಷ: ರಾಹುಲ್‌ ಗಾಂಧಿ ಟೀಕೆ

Last Updated 8 ಜೂನ್ 2019, 6:58 IST
ಅಕ್ಷರ ಗಾತ್ರ

ತಿರುವನಂತಪುರ:‘ನಾವು ರಾಷ್ಟ್ರಮಟ್ಟದಲ್ಲಿ ವಿಷದ ಜತೆ ಹೋರಾಡುತ್ತಿದ್ದೇವೆ. ಮಾನ್ಯ ನರೇಂದ್ರ ಮೋದಿ ಅವರೇ ಆ ವಿಷ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಟೀಕಿಸಿದರು.

ಲೋಕಸಭಾ ಚುನಾವಣೆ ಬಳಿಕ ಮೊದಲ ಬಾರಿಗೆ ತಮ್ಮ ಕ್ಷೇತ್ರ ವಯನಾಡ್‌ಗೆ ಮೂರು ದಿನಗಳ ಭೇಟಿ ನೀಡಿರುವ ಅವರು ಶನಿವಾರ ಎರಡನೇ ದಿನದ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

‘ನರೇಂದ್ರ ಮೋದಿ ಅವರೇ ವಿಷ. ‘ವಿಷ’ ಎಂಬ ಈ ಕಠುವಾದ ಪದವನ್ನು ನಾನು ಬಳಸುತ್ತೇನೆ. ಏಕೆಂದರೆ, ಈ ದೇಶವನ್ನು ವಿಭಜಿಸಲು ನರೇಂದ್ರ ಮೊದಿ ಅವರು ದ್ವೇಷದ ವಿಷವನ್ನು ಬಿತ್ತುತ್ತಿದ್ದಾರೆ. ದೇಶದ ಜನರನ್ನು ವಿಭಜಿಸಲು ಕೋಪ ಮತ್ತು ದ್ವೇಷವನ್ನು ಬಳಸುತ್ತಾರೆ. ಚುನಾವಣೆಯಲ್ಲಿ ಗೆಲ್ಲಲು ಸುಳ್ಳುನ್ನು ಬಳಸಿದರು’ ಎಂದು ರಾಹುಲ್‌ ಗಾಂಧಿ ಮೋದಿ ಅವರ ವಿರುದ್ಧ ಹರಿಹಾಯ್ದರು.

‘ಅವರು(ಮೋದಿ) ಈ ದೇಶದ ಕೆಟ್ಟ ಭವಾನೆಗಳನ್ನು ಪ್ರತಿನಿಧಿಸುತ್ತಾರೆ. ಅವರು ಕೋಪವನ್ನು ಪ್ರತಿನಿಧಿಸುತ್ತಾರೆ. ಅವರು ದ್ವೇಷವನ್ನು ಪ್ರತಿನಿಧಿಸುತ್ತಾರೆ. ಅವರು ಅಭದ್ರತೆಯನ್ನು ಪ್ರತಿನಿಧಿಸುತ್ತಾರೆ ಮತ್ತು ಸುಳ್ಳುಗಳನ್ನು ಪ್ರತಿನಿಧಿಸುತ್ತಾರೆ’ ಎಂದು ವಾಗ್ದಾಳಿ ಮಾಡಿದರು.

ವಯನಾಡಿನ ಪ್ರತಿಯೊಬ್ಬ ನಾಗರಿಕರಿಗೆ ಕಾಂಗ್ರೆಸ್‌ನ ಬಾಗಿಲು ಯಾವಾಗಲೂ ತೆರೆದಿರುತ್ತದೆ. ಎಲ್ಲರೂ ತಮ್ಮ, ವಯಸ್ಸು, ಯಾವ ಸ್ಥಳದಿಂದ ಬರುತ್ತೀರಿ ಎಂಬುದು ಮುಖ್ಯವಾಗದೆ ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಪಕ್ಷದಲ್ಲಿ ಅವಕಾಶವಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ರಾಹುಲ್‌ ವಯನಾಡ್‌ ಜಿಲ್ಲೆಯ ಕಲ್ಪೆಟ್ಟಾದಲ್ಲಿ ತೆರೆದ ವಾಹನದಲ್ಲಿ ರೋಡ್‌ ಶೊ ನಡೆಸಿದರು. ಮಹಿಳೆಯರು ಮಕ್ಕಳು ಸೇರಿದಂತೆ ರಸ್ತೆಯ ಇಕ್ಕೆಲದಲ್ಲಿ ಸೇರಿದ್ದ ಜನರತ್ತ ಕೈಬೀಸಿ ಕೃತಜ್ಞತೆ ಸಲ್ಲಿಸಿದರು.

ಮೊದಲ ದಿನದ ಭೇಟಿಯಲ್ಲಿ ಮಳೆಯನ್ನೂ ಲೆಕ್ಕಿಸದೆ ಕಾಳಿಕ್ಕಾವ್‌ ಪಟ್ಟಣದಲ್ಲಿ ಶುಕ್ರವಾರ ರೋಡ್‌ ಶೋ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT