ಮಹಿಳೆಯರ ಪಕ್ಷ ಅಸ್ತಿತ್ವಕ್ಕೆ

7

ಮಹಿಳೆಯರ ಪಕ್ಷ ಅಸ್ತಿತ್ವಕ್ಕೆ

Published:
Updated:

ನವದೆಹಲಿ: ದೇಶದ ರಾಜಕಾರಣ ಮತ್ತು ಶಾಸನಸಭೆಗಳಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯಕ್ಕಾಗಿ ಹೋರಾಡುವ ಉದ್ದೇಶದೊಂದಿಗೆ ಮಹಿಳೆಯರೇ ರಾಜಕೀಯ ಪಕ್ಷವೊಂದನ್ನು ಹುಟ್ಟು ಹಾಕಿದ್ದಾರೆ.

ಸಾಮಾಜಿಕ ಕಾರ್ಯಕರ್ತೆ ಮತ್ತು 36 ವರ್ಷದ ವೈದ್ಯೆ ಶ್ವೇತಾ ಶೆಟ್ಟಿ ಸಾರಥ್ಯದಲ್ಲಿ ‘ರಾಷ್ಟ್ರೀಯ ಮಹಿಳೆಯರ ಪಕ್ಷ’ (ಎನ್‌ಡಬ್ಲ್ಯೂಪಿ) ಮಂಗಳವಾರ ಅಸ್ತಿತ್ವಕ್ಕೆ ಬಂದಿದೆ.

‘ಶೋಷಣೆಗೆ ಒಳಗಾಗಿರುವ ಮಹಿಳೆಯರನ್ನು ಪ್ರತಿನಿಧಿಸುವುದು ಪಕ್ಷದ ಮುಖ್ಯ ಉದ್ದೇಶ. ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಕಿರುಕುಳದ ವಿರುದ್ಧ ಹೋರಾಡುತ್ತಿರುವ ಮಹಿಳೆಯರ ಧ್ವನಿಯಾಗಿ ಪಕ್ಷ ಕೆಲಸ ಮಾಡಲಿದೆ’ ಎಂದು ಅವರು ಭರವಸೆ ನೀಡಿದ್ದಾರೆ.

‘ಹೆಚ್ಚಿನ ಸಂಖ್ಯೆಯ ಮಹಿಳೆಯರು ಪಕ್ಷಕ್ಕೆ ಸೇರಿಬೇಕು. ಇದರಿಂದ ಮಹಿಳೆಯರ ಹಕ್ಕುಗಳ ಬಗ್ಗೆ ಗಟ್ಟಿ ಧ್ವನಿ ಎತ್ತಲು ಸಾಧ್ಯ’ ಎಂದು ಅವರು ಮನವಿ ಮಾಡಿದ್ದಾರೆ. ಚುನಾವಣೆ ಸ್ಪರ್ಧೆಯ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ.

ಪುರುಷ ಪ್ರಧಾನ: ರಾಜಕಾರಣ ಪುರುಷ ಪ್ರಧಾನ ಕ್ಷೇತ್ರ. ಮಹಿಳೆಯರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ದೊರೆಕಿಸಿಕೊಡಲು ಪಕ್ಷ ಪ್ರಯತ್ನಿಸಲಿದೆ ಎಂದು ಶ್ವೇತಾ ಶೆಟ್ಟಿ ತಿಳಿಸಿದ್ದಾರೆ. 2012ರಿಂದಲೇ ಪಕ್ಷ ಸ್ಥಾಪನೆ ಕೆಲಸ ಆರಂಭವಾಗಿತ್ತು. ತೆಲಂಗಾಣದಲ್ಲಿ ಸ್ವಯಂಸೇವಾ ಸಂಸ್ಥೆಯ ಜತೆ ಕೆಲಸ ಮಾಡುವಾಗ ಮಹಿಳೆಯರ ಅಭಿವೃದ್ಧಿಗಾಗಿ ರಾಷ್ಟ್ರೀಯ ಮಟ್ಟದ ಚಳವಳಿ ರೂಪಿಸುವ ಯೋಚನೆ ಇತ್ತು ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !